ಅಂತರಾಷ್ಟ್ರೀಯ

ಆಟ ಆಡುತ್ತಲೇ ಯೂಟ್ಯೂಬಲ್ಲಿ 71 ಕೋಟಿ ಸಂಪಾದಿಸಿದ

Pinterest LinkedIn Tumblr


ವಾಷಿಂಗ್ಟನ್: ಫೋರ್ಬ್ಸ್ ಈ ವರ್ಷದ ಶ್ರೀಮಂತರ ಒಂದೊಂದೇ ಪಟ್ಟಿ ಬಿಡುಗಡೆ ಮಾಡುತ್ತಿದೆ. ಇದೀಗ ಯೂಟ್ಯೂಬ್‍ ಮೂಲಕ ಅತ್ಯಧಿಕ ಆದಾಯ ಗಳಿಸುತ್ತಿರುವ ಸ್ಟಾರ್‍‍ಗಳ ಪಟ್ಟಿಯಲ್ಲಿ ಆರು ವರ್ಷದ ಬಾಲಕನೊಬ್ಬ ಸ್ಥಾನ ಪಡೆದಿದ್ದು ಎಲ್ಲರನ್ನೂ ಚಕಿತಗೊಳಿಸಿದ್ದಾನೆ. ಕೇವಲ ಗೊಂಬೆಗಳ ಜತೆ ಆಟವಾಡುವ ಮೂಲಕ ಆತ 11 ದಶಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 71 ಕೋಟಿ) ಸಂಪಾದಿಸಿದ್ದಾನೆ.

ಎಲ್ಲ ಮಕ್ಕಳಂತೆ ರ‍್ಯಾನ್‍ಗೂ ಗೊಂಬೆಗಳೆಂದರೆ ಇಷ್ಟ. ಆದರೆ ಅದು ಸ್ವಲ್ಪ ಜಾಸ್ತಿ ಎಂದೇ ಹೇಳಬೇಕು. ಒಂದು ಗೊಂಬೆ ಆತನ ಕೈಗೆ ಸಿಕ್ಕಿದೆ ಎಂದರೆ ಅದನ್ನು ಅಮೂಲಾಗ್ರವಾಗಿ ಪರಿಶೀಲಿಸುತ್ತಾನೆ. ಅದೇನು, ಅದರಲ್ಲಿನ ವಿಶೇಷತೆಗಳೇನು ಎಂಬುದನ್ನು ಸಂಪೂರ್ಣ ಸ್ಟಡಿ ಮಾಡುತ್ತಿರುತ್ತಾನೆ. ನಾಲ್ಕು ವರ್ಷಗಳ ವಯಸ್ಸಿನಲ್ಲಿ ಆತನ ಆಸಕ್ತಿ ಗಮನಿಸಿದ ತಂದೆತಾಯಿ ವೀಡಿಯೋಗಳನ್ನು ತೆಗೆದು ‘ರ‍್ಯಾನ್ ಟಾಯ್ಸ್ ರಿವ್ಯೂ’ ಎಂಬ ಯೂಟ್ಯೂಬ್ ಚಾನೆಲ್ ಸೃಷ್ಟಿಸಿ ಅದರಲ್ಲಿ ಆ ವೀಡಿಯೋಗಳನ್ನು ಅಪ್‍‍ಲೋಡ್ ಮಾಡುತ್ತಾ ಬಂದಿದ್ದಾರೆ.

ಆ ಚಾನೆಲ್‍ಗೆ 10 ಲಕ್ಷಕ್ಕೂ ಅಧಿಕ ಮಂದಿ ಸಬ್‍ಸ್ಕ್ರೈಬ್ ಆಗಿದ್ದಾರೆ. ರ‍್ಯಾನ್ ವೀಡಿಯೋಗಳನ್ನು ನೋಡುವ ಬಹಳಷ್ಟು ಮಂದಿ ಗೊಂಬೆಗಳನ್ನು ಕೊಳ್ಳುತ್ತಿರುತ್ತಾರೆ. ಅವುಗಳ ಪ್ರಾತ್ಯಕ್ಷಿಕೆ ಕೊಡುವ ಸಮಯದಲ್ಲಿ ಆತನ ಹಾವಭಾವಗಳಿಗೆ ಎಲ್ಲರೂ ಆಕರ್ಷಿತರಾಗುತ್ತಾರೆ. ಈ ವೀಡಿಯೋಗಳಿಗಾಗಿ ಆತನಿಗೆ ಆಯಾ ಕಂಪೆನಿಗಳಿಂದ ಸಾಕಷ್ಟು ಹಣ ಹರಿದುಬರುತ್ತದೆ. ಈ ವರ್ಷ 71 ಕೋಟಿ ಸಂಪಾದನೆ ಮಾಡುವ ಮೂಲಕ ಯೂಟ್ಯೂಬ್ ಸ್ಟಾರ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾನೆ.

ಇನ್ನು ಈ ಪಟ್ಟಿಯಲ್ಲಿ ಡೇನಿಯಲ್ ಮಿಡಲ್ಟನ್ (16.5 ದಶಲಕ್ಷ ಡಾಲರ್) ಮೊದಲ ಸ್ಥಾನದಲ್ಲಿದ್ದಾರೆ. ಇವಾನ್ ಫೊಂಗ್ (ವಾನೋಸ್ಸೆ ಗೇಮಿಂಗ್ 15.5 ಮಿಲಿಯನ್ ಡಾಲರ್), ಡ್ಯೂಡ್ ಫರ್‍‍ಫೆಕ್ಟ್ (14 ಮಿಲಿಯನ್‍ಗಳು) ಪಟ್ಟಿಯಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ ಇಂಡೋ-ಕೆನಡಿಯನ್ ಕಾಮೆಡಿಯನ್ ಲಿಲ್ಲಿ ಸಿಂಗ್ ಹತ್ತನೇ ಸ್ಥಾನದಲ್ಲಿ ಇರುವುದು ವಿಶೇಷ.

Comments are closed.