
ಬ್ರೆಜಿಲಿಯಾ: ಗಂಡನಾದವನು ಮನೆಯಲ್ಲಿ ಇಲ್ಲದಿದ್ದಾಗ ಹೆಂಡತಿಯಾದವಳು ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಗಂಡ ಬಂದರೆ…
ಆತನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿಸದ್ದ ವ್ಯಕ್ತಿ ವಸ್ತ್ರವನ್ನೂ ತೊಟ್ಟುಕೊಳ್ಳದೆ ಎದ್ದೆನೋ ಬಿದ್ದೆನೋ ಎಂದು ಕಿಟಕಿಯಿಂದ ಪಾರಾಗುತ್ತಾನೆ. ಈ ಸನ್ನಿವೇಶವನ್ನು ನೀವು ಇಷ್ಟು ದಿನ ಟೀವಿ, ಸಿನಿಮಾದಲ್ಲಿ ನೋಡಿರುತ್ತೀರಿ. ಆದರೆ ಬ್ರೆಜಿಲ್ನ ಜನತೆಗೆ ಇದನ್ನು ಕಣ್ಣಾರೆ ಸವಿಯುವ ಅವಕಾಶ ಸಿಕ್ಕಿದೆ.
ವಿವಾಹಿತ ಪರಸ್ತ್ರೀ ಜತೆ ಆಕೆಯ ‘ಅಕ್ರಮ’ ಗೆಳೆಯನೊಬ್ಬ ಆಕೆಯ ಮನೆಯಲ್ಲೇ ಕಾಮಕೇಳಿಯಲ್ಲಿ ತೊಡಗಿದ್ದ. ಕಾಮಕೇಳಿ ಉನ್ಮಾದದ ಸ್ಥಿತಿಯಲ್ಲಿದ್ದಾಗಲೇ ಆಕೆಯ ಗಂಡ ಮನೆಗೆ ಬಂದುಬಿಟ್ಟಿದ್ದಾನೆ.
ಅರೆ ವಸ್ತ್ರದಲ್ಲಿದ್ದ ಹೆಂಡತಿಯ ಸ್ಥಿತಿಯನ್ನು ಕಂಡು ಅನುಮಾನಗೊಂಡ ಗಂಡ, ಜಗಳಕ್ಕೆ ಇಳಿದಿದ್ದಾನೆ. ಇನ್ನು ಬೆಚ್ಚಿದ ವಿಟಪುರುಷನು ಬೆಡ್ರೂಂನಿಂದ ಪಾರಾಗಿ ಕಿಟಕಿಯ ಮರೆಯಲ್ಲೇ ಅವಿತುಕೊಂಡಿದ್ದಾನೆ. ಅಷ್ಟರಲ್ಲಾಗಲೇ ಕಿಟಕಿ ಮರೆಯಲ್ಲಿ ಅವಿತುಕೊಂಡವನನ್ನು ನೋಡಿ ಜನ ರಸ್ತೆಯಲ್ಲಿ ಗುಂಪು ಸೇರಿದ್ದಾರೆ.
ಆದರೆ, ಕೊನಗೆ ಮಾನ ಮರ್ಯಾದೆ ಬದಿಗಿಟ್ಟು ಕಿಟಕಿಯಿಂದ ಕೆಳಗಿಳಿಯಲು ಒದ್ದಾಡಿ ಜನರ ಮಧ್ಯೆಯೇ ಜಿಗಿದು ವಿಟಪುರುಷ ಪಾರಾಗಿದ್ದಾನೆ.
Comments are closed.