ಅಂತರಾಷ್ಟ್ರೀಯ

ಟ್ವಿಟರ್‌ ಮೂಲಕ 9 ಜನರನ್ನು ಕೊಂದ ಜಪಾನಿ ಯುವಕ!

Pinterest LinkedIn Tumblr


ಟೋಕಿಯೋ: ಜಪಾನ್‌ನ ಪೊಲೀಸರು 27 ವರ್ಷದ ವ್ಯಕ್ತಿಯೊಬ್ಬನ್ನು ಒಂಭತ್ತು ಜನರನ್ನು ಕೊಲೆ ಮಾಡಿದ ಆರೋಪದಡಿ ಬಂಧಿಸಿದ್ದಾರೆ. ಆದರೆ ಈತ ಕೊಲೆ ಮಾಡಿರುವ ಅಷ್ಟೂ ವ್ಯಕ್ತಿಗಳು ಭೇಟಿಗೂ ಮುನ್ನ ಟ್ವಿಟರ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಟ್ವೀಟ್‌ ಮಾಡಿದ್ದರಂತೆ.

ತಕಜಿರೋ ಶಿರೈಶಿ ಎಂಬಾತನ್ನು ಪೊಲೀಸರು ಬಂಧಿಸಿದ್ದು, ಈತ ಎಂಟು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಕೊಲೆ ಮಾಡಿ ಮೃತ ದೇಹಗಳನ್ನು ತನ್ನ ಅಪಾರ್ಟ್‌ಮೆಂಟ್‌ನ ಕೋಣೆಯಲ್ಲಿ ಬಚ್ಚಿಟ್ಟಿದ್ದನಂತೆ.

ಮಾಹಿತಿಗಳ ಪ್ರಕಾರ, ಮೃತರೆಲ್ಲರೂ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಆತ್ಮಹತ್ಯೆ ಮಾಡಕೊಳ್ಳುವುದು, ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಇಂತಹ ವ್ಯಕ್ತಿಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ಯುವಕ ಅವರಿಗೆ ಆತ್ಮಹತ್ಯೆ ಸಹಾಯ ಮಾಡುವುದಾಗಿ ತಮ್ಮ ಅಪಾರ್ಟ್‌ಮೆಂಟ್‌ಗೆ ಕರೆಸಿ ಕೊಲೆಗೈದಿದ್ದ ಎಂದು ದೈನಿಕವೊಂದು ವರದಿ ಮಾಡಿದೆ.

ಕೆಲ ದಿನಗಳ ಹಿಂದೆ 23 ವರ್ಷದ ಯುವತಿಯೊಬ್ಬಳು ಕಣ್ಮರೆಯಾಗಿದ್ದಳು, ಹೀಗಾಗಿ ಈಕೆಯ ಸೋದರ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಈಕೆ ತಕಜೀರೋನೊಂದಿಗೆ ಆತನ ಅಪಾರ್ಟ್‌ಮೆಂಟ್‌ಗೆ ಬಂದಿರುವುವ ಸಿಸಿಟಿವಿ ಫೂಟೇಜ್‌ ದೊರಕಿದೆ. ಆಕೆಯ ಟ್ವಿಟರ್‌ ಅಕೌಂಟ್‌ನಲ್ಲಿ ‘ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದೆ. ಆದರೆ ಒಬ್ಬಂಟಿಯಾಗಿ ಸಾಯಲು ಇಷ್ಟವಿಲ್ಲ, ಯಾರಾದರೂ ನನ್ನೊಂದಿಗೆ ಬರುತ್ತೀರ ಎಂದು ಕೊನೆಯದಾಗಿ ಟ್ಟೀಟ್‌ ಮಾಡಿದ್ದಳು. ಇದಾದ ಬಳಿಕ ಆರೋಪಿಯನ್ನು ಭೇಟಿಯಾಗಿದ್ದಳು.

ಪೊಲೀಸರಿಗೆ ದೊರಕಿದ ಸಿಸಿಟಿವಿ ಫೂಟೇಜ್‌ ಆಧಾರದ ಮೇಲೆ ಆತನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದ ಪೊಲೀಸರಿಗೆ ಶಾಕ್‌ ಕಾದಿತ್ತು. ಆತನ ಮನೆ ತುಂಬಾ ಹೆಣಗಳೇ ತುಂಬಿತ್ತು. ಅಲ್ಲದೇ, ಮಹಿಳೆಯರನ್ನು ಕೊಲೆ ಮಾಡುವುದಕ್ಕು ಮುನ್ನ ಅವರನ್ನು ಅತ್ಯಾಚಾರ ಕೂಡಾ ಮಾಡಿದ್ದ ಎಂದು ಆತನೇ ಒಪ್ಪಿಕೊಂಡಿದ್ದಾನೆ.

ಪೊಲೀಸರು ಈವರೆಗೆ 240 ಮನುಷ್ಯರ ಎಲುಬುಗಳನ್ನು ಆತನ ಅಪಾರ್ಟ್‌ಮೆಂಟ್‌ನಿಂದ ಪಡೆದಿದ್ದಾರೆ. ಕೊಲೆ ಮಾಡಿದ ಬಳಿಕ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಹೆಣಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತಿದ್ದ ಎಂದು ಆತನೇ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.