ಅಂತರಾಷ್ಟ್ರೀಯ

ನ್ಯೂಯಾರ್ಕ್ ನಲ್ಲಿ ಉಗ್ರ ದಾಳಿ; ಅಮಾಯಕರ ಮೇಲೆ ಟ್ರಕ್ ಹರಿಸಿ 8 ಹತ್ಯೆ

Pinterest LinkedIn Tumblr

ನ್ಯೂಯಾರ್ಕ್‌: ವಿಶ್ವ ವ್ಯಾಪಾರ ಕೇಂದ್ರ ಸ್ಮಾರಕದ ಬಳಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಪಾದಾಚಾರಿಗಳ ಮೇಲೆ ಟ್ರಕ್ ಹರಿಸುವ ಮೂಲಕ 8 ಮಂದಿಯನ್ನು ಹತ್ಯೆ ಮಾಡಲಾಗಿದೆ.

ಮೂಲಗಳ ಪ್ರಕಾರ ಬಾಡಿಗೆ ಪಿಕಪ್‌ ವಾಹನವೊಂದನ್ನು ಉಗ್ರಗಾಮಿಯೋರ್ವ ಪಾದಚಾರಿಗಳು ಮತ್ತು ಸೈಕಲ್‌ ಸವಾರರ ಮೇಲೆ ಹರಿಸಿ 8 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಅಂತೆಯೇ ಘಟನೆಯಲ್ಲಿ ಇತರೆ 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ವಾಹನ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸಾಯುವ ಮುನ್ನ ಉಗ್ರ ‘ಅಲ್ಲಾಹು ಅಕ್ಬರ್‌’ ಎಂದು ಘೋಷಣೆ ಕೂಗಿದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇನ್ನು ಈ ದಾಳಿ ಉಗ್ರಕೃತ್ಯವೆಂದು ನ್ಯೂಯಾರ್ಕ್ ಸರ್ಕಾರ ಸ್ಪಷ್ಟಪಡಿಸಿದೆ. ಅಂತೆಯೇ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದೆಯಾದರೂ, ಸಂಘಟನೆ ಮಾತ್ರ ಈ ವರೆಗೂ ದಾಳಿಯ ಹೊಣೆ ಹೊತ್ತಿಲ್ಲ. ಇನ್ನು ಈ ಉಗ್ರ ದಾಳಿಯನ್ನು ವಿಶ್ವ ಮುಖಂಡರು ಖಂಡಿಸಿದ್ದು, ‘ಇದೊಂದು ಉಗ್ರರ ಹೇಡಿತನದ ಕೃತ್ಯ’ ಎಂದು ಲಂಡನ್ನಿನ ಮೇಯರ್‌ ಬಣ್ಣಿಸಿದ್ದಾರೆ.

ಎಂಟು ಮಂದಿಯನ್ನು ವಾಹನ ಹರಿಸಿ ಕೊಂದ ಬಳಿಕ ವಾಹನದಿಂದ ಕೆಳಗೆ ಹಾರಿ ಇನ್ನಷ್ಟು ಮಂದಿಯನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ ಹಂತಕ ಚಾಲಕನನ್ನು ಪೊಲೀಸರು ಗುಂಡಿಟ್ಟು ಕೊಂದು ಹಾಕಿದ್ದಾರೆ.

ದಾಳಿ ನಡೆಸಿದ ಉಗ್ರನನ್ನು 29 ವರ್ಷದ ಉಜ್ಬೇಕಿಸ್ತಾನದ ಪ್ರಜೆ ಎಂದು ಗುರಿತಿಸಲಾಗಿದ್ದು, ಈತ ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ.

Comments are closed.