ಅಂತರಾಷ್ಟ್ರೀಯ

ಬಾಂಬ್‌ ಪತ್ತೆ ಮಾಡದ ನಾಯಿಗೆ ವಜಾ ಶಿಕ್ಷೆ

Pinterest LinkedIn Tumblr


ಅಯ್ಯೋ ಯಾವತ್ತೂ ಒಂದೇ ರೀತಿಯ ಕೆಲಸ. ಎಕ್ಸೆ„ಟ್‌ ಮೆಂಟೇ ಇಲ್ಲ. ಹೀಗೆಂದು ಕಚೇರಿಗಳಲ್ಲಿ ಕೆಲಸ ಮಾಡುವವರು ಅಂದುಕೊಳ್ಳುತ್ತಾರೆ. ಒಂದು ಹಂತದ ವರೆಗೆ ಆಯಾ ಕಚೇರಿಯ ಮುಖ್ಯಸ್ಥರು ಈ ರೀತಿ ವರ್ತಿಸುವವರನ್ನು ಸಹಿಸಿಕೊಳ್ಳುತ್ತಾರೆ.

ಅಮೆರಿಕದಲ್ಲೊಂದು ವಿಶೇಷ ಪ್ರಕರಣವೇ ನಡೆದದು ಹೋಗಿದೆ. ಜಗತ್ತಿನ ಅತ್ಯಂತ ವೃತ್ತಿಪರ ತನಿಖಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಸಿಐಎ) ತನ್ನ ಬಾಂಬ್‌ ಪತ್ತೆ ಮಾಡುವ ಘಟಕದ ನಾಯಿಯೊಂದನ್ನು ಕರ್ತವ್ಯದಿಂದಲೇ ತೆಗೆದು ಹಾಕಿದೆ.

ಲುಲು ಎಂಬ ಹೆಸರಿನ ಹೆಣ್ಣು ನಾಯಿ ಶಿಕ್ಷೆಗೆ ಒಳಗಾದದ್ದು. ಏಕೋ ಏನೋ ಇತ್ತೀಚಿನ ಕೆಲವು ವಾರಗಳಿಂದ ಲುಲು ನಾಯಿ ಸ್ಫೋಟಕ ಪತ್ತೆ ಮಾಡುವುದರತ್ತ ಹೆಚ್ಚಿನ ಆದ್ಯತೆ ತೋರಿಸಲಿಲ್ಲ. ಅದರ ಪ್ರೀತಿಯ ಆಹಾರ, ವ್ಯಾಯಾಮ ಕಸರತ್ತುಗಳನ್ನು ಮಾಡಿಸಿದರೂ ಕೆಲಸದತ್ತ ಗಮನ ಹರಿಸಲೇ ಇಲ್ಲ. ಹೀಗಾಗಿ ಬಾಂಬ್‌ ಪತ್ತೆ ಮಾಡುವ ವಿಭಾಗದಿಂದ ಹಿಂಪಡೆದುಕೊಳ್ಳಲಾಗಿದೆ ಎಂದು ಸಿಐಎಯ “ಪಬ್‌ದೇಟ್‌ ‘ನಲ್ಲಿ ಅಪ್‌ಡೇಟ್‌ ಮಾಡಲಾಗಿದೆ.

-ಉದಯವಾಣಿ

Comments are closed.