ಅಂತರಾಷ್ಟ್ರೀಯ

ಮನುಷ್ಯರ ಮುಖವುಳ್ಳ ಬೆಕ್ಕಿನಂಥ ಚಿಕ್ಕ ಪ್ರಾಣಿ ಪತ್ತೆ..! ಸತ್ಯವೋ…ಸುಳ್ಳೋ..? ಇಲ್ಲಿದೆ ವರದಿ…

Pinterest LinkedIn Tumblr

ಮಲೇಷಿಯಾ: ಮನುಷ್ಯರ ಮುಖವುಳ್ಳ ಬೆಕ್ಕಿನಂಥ ಚಿಕ್ಕ ಪ್ರಾಣಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದು ಮಲೇಶಿಯಾದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಹರಡಿದೆ.

ತಿಳಿ ಗುಲಾಬಿ ಮೈ ಬಣ್ಣ ಹೊಂದಿರುವ ಈ ಪ್ರಾಣಿ ಮನುಷ್ಯರನ್ನು ಹೋಲುವ ಮುಖ ಹೊಂದಿದ್ದು, ಬಾಯಿಯಲ್ಲಿ ಎರಡು ಕೋರೆಹಲ್ಲುಗಳಿವೆ. ಮೈಮೇಲೆಲ್ಲ ಕಪ್ಪು ಬಣ್ಣದ ಉದ್ದುದ್ದ ಕೂದಲನ್ನೂ ಹೊಂದಿದ್ದು, ಅದರ ನಾಲ್ಕು ಕಾಲುಗಳು ಬೆಕ್ಕನ್ನು ಹೋಲುವಂತಿವೆ.

ಈ ವಿಚಿತ್ರ ಪ್ರಾಣಿಯ ಫೋಟೋ, ವಿಡಿಯೋ ಪ್ರಚಾರ ಪಡೆಯುತ್ತಿದ್ದಂತೆ, ಮಲೇಶಿಯಾ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ನೈಜ ಫೋಟೋಗಳಲ್ಲ. ಯಾರೋ ಬೇಕೆಂದೇ ಇಂಥ ಪ್ರಾಣಿಯನ್ನು ಸಿಲಿಕಾನ್‌ನಿಂದ ತಯಾರು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಚಾರ ನೀಡಿದ್ದಾರೆ ಎಂದಿದ್ದಾರೆ.

ಪಶ್ಚಿಮ ಮಲೇಶಿಯಾದ ಪಹಾಂಗ್ ಎಂಬ ಪ್ರದೇಶದಲ್ಲಿ ಈ ಕೃತಕ ಪ್ರಾಣಿಯನ್ನು ಸೃಷ್ಟಿ ಮಾಡಿ ಶೂಟ್ ಮಾಡಲಾಗಿದೆ. ಯಾರು ಈ ರೀತಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಇಂಥ ಪ್ರಾಣಿ ಅಸ್ತಿತ್ವದಲ್ಲಿಲ್ಲ. ಈ ಬಗ್ಗೆ ಭಯ, ಆತಂಕ ಬೇಡ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇಂಥ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Comments are closed.