ಅಂತರಾಷ್ಟ್ರೀಯ

ಪಾಕ್ ಸೆನೆಟ್ ಉಪಾಧ್ಯಕ್ಷರಿಗೆ ವೀಸಾ ನಿರಾಕರಣೆ: ಅಮೆರಿಕಾಗೆ ಪಾಕ್ ಎಚ್ಚರಿಕೆ

Pinterest LinkedIn Tumblr


ಇಸ್ಲಾಮಾಬಾದ್, ಫೆ. ೧೩- ಪಾಕಿಸ್ತಾನ ಸೆನೆಟ್ ಉಪಾಧ್ಯಕ್ಷರಿಗೆ ಅಮೇರಿಕಾ ವೀಸಾ ನಿರಾಕರಿಸಿರುವುದಕ್ಕೆ ತೀವ್ರ ಪ್ರತಿಕ್ರಿಯೇ ನೀಡಿರುವ ಪಾಕಿಸ್ತಾನ ವಿಶ್ವಸಂಸ್ಥೆ ಸಹಯೋಗದಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯುವ ಅಂತರ ಸಂಸದೀಯ ಒಕ್ಕೂಟದ ಸಭೆಯನ್ನು ಬಹಿಷ್ಕರಿಸುವುದಾಗಿ ಅಮೇರಿಕಾವನ್ನು ಎಚ್ಚರಿಸಿದೆ.

ವಿಶ್ವ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಇಂಟರ್ ಪಾಱ್ಲಿಮೆಂಟರಿ ಸಭೆಯಲ್ಲಿ ಭಾಗವಹಿಸಬೇಕಿದ್ದ, ಸೆನೆಟ್ ಉಪಾಧ್ಯಕ್ಷ ಮೌಲಾನ ಅಬ್ದುಲ್ ಘಪೂರ್‌ಗೆ ಅಮೇರಿಕಾ ವೀಸಾ ನಿರಾಕರಿಸಿದೆ.

ಉಗ್ರವಾದವನ್ನು ಘೋಷಿಸುತ್ತಾ ಬಂದಿರುವ, ಉಗ್ರವಾದಿ ಗುಂಪುಗಳೊಂದಿಗೆ ಮೃಧು ಧೋರಣೆ ಹೊಂದಿರುವ ಪಾಕಿಸ್ತಾನದ ನಿಲುವನ್ನು ಮೊದಲಿನಿಂದಲೂ ಗುಮಾನಿಯಿಂದಲೇ ನೋಡುತ್ತಿರುವ ಪಾಕಿಸ್ತಾನ ಮೌಲಾನ ಅಬ್ದುಲ್ ಘಫೂರ್‌ಗೆ ವೀಸಾ ನಿರಾಕರಿಸಲು, ಇನ್ನೊಂದು ಕಾರಣವೆಂದರೆ, ಮೌಲಾನಾ ನೇತೃತ್ವದ ಪಾಕಿಸ್ತಾನದ ಇಸ್ಲಾಮ್ ಭೂತವಾದಿ ಪಕ್ಷವಾದ ಜಮಾತ್- ಉಲೇಮಾ- ಎ- ಇಸ್ಲಾಂ ಫಜಲ್ ಪಕ್ಷ ಅಮೇರಿಕಾ ವಿರುದ್ಧ ಕಟ್ಟಾ ವಿರೋಧಿ ನಿಲುವನ್ನು ಹೊಂದಿರುವುದು.

ಸಭೆ ಬಹಿಷ್ಕಾರ
ವೀಸಾ ನಿರಾಕರಣೆಯ ವಿರುದ್ಧ ಪ್ರತಿಭಟನಾ ಅಂಗವಾಗಿಯೇ ನ್ಯೂಯಾರ್ಕ್ ಸಭೆಯಲ್ಲಿ ಭಾಗವಹಿಸದಿರಲು ಸೆನೆಟ್‌ನ ಅಧ್ಯಕ್ಷ ರಾಜಾ ರಬ್ಬಾನಿ ತೀರ್ಮಾನಿಸಿದ್ದಾರೆ.

ಏಟಿಗೆ ಎದಿರೇಟು ಎನ್ನುವಂತೆ ಪಾಕಿಸ್ತಾನದ ಈ ನಿಲುವಿಗೆ ಟ್ರಂಪ್ ಸರ್ಕಾರದ ಪ್ರತಿಕ್ರಿಯೆ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.

Comments are closed.