ಅಂತರಾಷ್ಟ್ರೀಯ

ಸ್ಮಾರ್ಟ್ ಫೋನ್: ಶೀಘ್ರದಲ್ಲಿಯೇ ನಿಮ್ಮ ಪ್ಲೇಸ್ಟೋರ್’ನಿಂದ ಕೆಲ ಆ್ಯಪ್’ಗಳು ಡಿಲಿಟ್!

Pinterest LinkedIn Tumblr


ಗೂಗಲ್ ಸಂಸ್ಥೆ ಸ್ಮಾರ್ಟ್ ಫೋನ್ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ನಿಮ್ಮ ಫೋನ್’ನಲ್ಲಿರುವ ಪ್ಲೇಸ್ಟೋರ್’ನಿಂದ ಹಲವು ಆ್ಯಪ್’ಗಳು ಡೆಲಿಟ್ ಆಗಲಿವೆ. ಸ್ವತಃ ಪ್ಲೇಸ್ಟೋರ್ ಸಂಸ್ಥೆಯೇ ಆ್ಯಪ್’ಗಳನ್ನು ತೆಗೆದು ಹಾಕಲಿದೆ. ಇದು ಫೋನ್ ಬಳಕೆದಾರರರಿಂದ ಆದ ಸಂಕಷ್ಟವಲ್ಲ ಆ್ಯಪ್ ತಯಾರಿಕಾ ಸಂಸ್ಥೆಗಳಿಂದ ಆಗಿರುವ ತೊಂದರೆ.
ಪ್ಲೇಸ್ಟೋರ್’ನ ಮಾತೃ ಸಂಸ್ಥೆ ಗೂಗಲ್ ಇಂತಹದೊಂದು ಆದೇಶ ಹೊರಡಿಸಿರುವುದಕ್ಕೆ ಕಾರಣ ಹಲವು ಆ್ಯಪ್ ಸಂಸ್ಥೆಗಳು ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸದಿರುವುದು. ಈಗಾಗಲೇ ಹಲವು ಆ್ಯಪ್ ಅಭಿವೃದ್ಧಿ ಸಂಸ್ಥೆಗಳಿಗೆ ನೋಟಿಸ್ ಕೂಡ ನೀಡಲಾಗಿದೆ. ಗ್ರಾಹಕರ ಅನುಕೂಲ, ಮೊಬೈಲ್’ನ ತಾಂತ್ರಿಕ ಸಮಸ್ಯೆ, ಖಾಸಗಿ ಮಾಹಿತಿಗಳನ್ನು ಗೋಪ್ಯವಾಗಿಡುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸದಿರುವುದು ಡೆಲಿಟ್ ಮಾಡಲಿಕ್ಕೆ ಪ್ರಮುಖ ಕಾರಣಗಳು.
ಗೂಗಲ್’ನ’ ಗ್ರಾಹಕರ ಡಾಟಾ ನಿಯಮ ‘ಗೌಪ್ಯತೆ ನೀತಿ ಮತ್ತು ಸುರಕ್ಷಿತ ಸಂವಹನ’ ದ ಪ್ರಕಾರ ವೈಯಕ್ತಿಕ ಆರ್ಥಿಕ ಮತ್ತು ಪಾವತಿ, ದೃಢೀಕರಣ ದೂರವಾಣಿ ಪುಸ್ತಕ ಅಥವಾ ಸಂಪರ್ಕ ದಶಮಾಂಶ, ಮೈಕ್ರೊಫೋನ್ ಮತ್ತು ಕ್ಯಾಮೆರಾ ಸೆನ್ಸರ್ ಅನ್ನು ಮತ್ತು ಸೂಕ್ಷ್ಮ ಸಾಧನ ಡೇಟಾ ಮಾಹಿತಿಗಳು ಸೇರಿದಂತೆ ಹಲವು ನಿಯಮಗಳನ್ನು ಆ್ಯಪ್ ಅಭಿವೃದ್ಧಿ ಸಂಸ್ಥೆಗಳು ಪಾಲಿಸಿಲ್ಲ.
ಮಾರ್ಚ್ 15ರೊಳಗಾಗಿ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸಿರದ ಸಂಸ್ಥೆಗಳು ಪ್ಲೇಸ್ಟೋರ್’ನ ಅನುಮತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ನಿಯಮಗಳನ್ನು ಪಾಲಿಸಿರುವ ಅಧಿಕೃತ ಅಭಿವೃದ್ಧಿ ಸಂಸ್ಥೆಗಳ ಆ್ಯಪ್’ಗಳು ಮಾತ್ರ ನಿಮ್ಮ ಮೊಬೈಲ್’ನಲ್ಲಿ ಉಳಿದುಕೊಳ್ಳುತ್ತವೆ. ಉಳಿದವೆಲ್ಲ ಡೆಲಿಟ್ ಆಗಲಿದೆ. ಫೇಕ್ ಆ್ಯಪ್’ಗಳು ನಿಮ್ಮ ಮೊಬೈ’ನಲ್ಲಿ ಇರುವುದಿಲ್ಲ.

Comments are closed.