
ಲಂಡನ್(ಜ.23): ಸೆಕ್ಸ್ ವಿಷಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ಸುದ್ದಿ ಮಾಡುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈಗ ಕೆಟ್ಟದೊಂದು ಟ್ರೆಂಡ್ ಶುರುವಾಗತೊಡಗಿದೆ. ಅದುವೇ ‘ಶುಗರ್ ಡ್ಯಾಡಿ, ಶುಗರ್ ಬೇಬಿ’ ಟ್ರೆಂಡ್.. ಕಾಲೇಜು ಹುಡುಗಿಯರು ತಮ್ಮ ಐಶಾರಾಮಿ ಹುಚ್ಚಿಗೆ ಬಿದ್ದು ಹಣಕ್ಕಾಗಿ ಶ್ರೀಮಂತ ಹಿರಿಯ ವ್ಯಕ್ತಿಗಳ ಜೊತೆ ಹಾಸಿಗೆ ಹಂಚಿಕೊಳ್ಳುವ ಪ್ರೌವೃತ್ತಿ ಶುರುಮಾಡಿದ್ದಾರೆ. ಇಂಗ್ಲೆಂಡ್ ಅಮೆರಿಕದಲ್ಲಿ ಇಂತಹ ಟ್ರೆಂಡ್ ಈಗ ಹೆಚ್ಚತೊಡಗಿದೆ. ಕೆಲ ಯುವತಿಯರು ತಮ್ಮ ವಿದ್ಯಾಭ್ಯಾಸ ಮತ್ತಿತ್ತರ ಜೀವನದ ವೆಚ್ಚ ಭರಿಸಲು ಈ ಟ್ರೆಂಡ್’ಗೆ ಒಗ್ಗಿಕೊಳ್ಳುತ್ತಿದ್ದರೆ, ಇನ್ನೂ ಕೆಲ ಐಶಾರಾಮಿ ಜೀವನ ನಡೆಸಲು ಈ ಹಾದಿ ಹಿಡಿದಿದ್ದಾರೆ.
ವಿಚ್ಛೇದಿತ ವ್ಯಕ್ತಿಗಳು, ಅನ್ಯ ಸಂಗ ಬಯಸುವ ಶ್ರೀಮಂತ ಹಿರಿಯರು ಈ ಹುಡುಗಿಯರ ಟಾರ್ಗೆಟ್. ಲಂಡನ್ನಿನ 22 ವರ್ಷದ ಯುವತಿ ಹೇಳುವ ಪ್ರಕಾರ, ನಾನು ನನ್ನ ವಿದ್ಯಾಭ್ಯಾಸದ ವೆಚ್ಚ ಭರಿಸಲು ಬಾರಿನಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿ ನನಗೆ ದಿನಕ್ಕೆ 5 ಪೌಂಡ್ ಸಿಗುತ್ತಿತ್ತು. ಆದರೆ, ಇದರಿಂದ ನನ್ನ ವಿದ್ಯಾಭ್ಯಾಸದ ವೆಚ್ಚ ತೀರುತ್ತಿರಲಿಲ್ಲ. ಜೊತೆಗೆ ಕಾಲೇಜಿಗೆ ತೆರಳಲು ಕಷ್ಟವಾಗುತ್ತಿತ್ತು. ಇದಕ್ಕಾಗಿ ನಾನು ಶುಗರ್ ಡ್ಯಾಡಿಗಳ ಸಂಗ ಬೆಳೆಸಿದೆ. ಇದರಿಂದ ದಿನಕ್ಕೆ ನನಗೆ ಸಾವಿರ ಡಾಲರ್’ಗಳಷ್ಟು ಹಣ ಸಿಗುತ್ತೆ. ಇದು ನನ್ನ ವಿದ್ಯಾಭ್ಯಾಸದ ಜೊತೆಗೆ ನನ್ನ ನಿತ್ಯದ ಖರ್ಚುಗಳನ್ನೂ ತೀರಿಸುತ್ತಿದೆ ಎನ್ನುತ್ತಾಳೆ.
ಅಂತರಾಷ್ಟ್ರೀಯ
Comments are closed.