ಅಂತರಾಷ್ಟ್ರೀಯ

ಪಪುವಾ ನ್ಯೂ ಗಿನಿಯಾದಲ್ಲಿ 8.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

Pinterest LinkedIn Tumblr


ಪಪುವಾ: ಪಪುವಾ ನ್ಯೂ ಗಿನಿಯಾದಲ್ಲಿ ಭಾನುವಾರ 8.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಮೀಪದ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆ ಹೇಳಿದೆ.
ಇಂದು ಬೆಳಗಿನ ಜಾವ ಸ್ಥಳೀಯ ಕಾಲಮಾನ 3.30ರ ಸುಮಾರಿಗೆ ಪಪುವಾ ನ್ಯೂ ಗಿನಿಯಾದ ಪಶ್ಚಿಮ ಪಂಗುನಾದಿಂದ 40 ಕಿ.ಮೀ.ದೂರದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 8.0ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂವಿಜ್ಞಾನ ಇಲಾಖೆ ತಿಳಿಸಿದೆ.
153 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, ಭೂಕಂಪನದಿಂದ ಹಾನಿ ಉಂಟಾದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಭಾರಿ ಪ್ರಮಾಣದ ಭೂಕಂಪದಿಂದಾಗಿ ಪಪುವಾ ನ್ಯೂ ಗಿನಿಯಾದ ಕರಾವಳಿಯಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ.

Comments are closed.