ಅಂತರಾಷ್ಟ್ರೀಯ

ಅಂಗರಕ್ಷಕನ ಗುಂಡಿಗೆ ಬಲಿಯಾಗಿ ಬಿಡುತ್ತಿದ್ದರು ಬ್ರಿಟನ್ ರಾಣಿ ಎಲಿಝಬೆತ್

Pinterest LinkedIn Tumblr


ಲಂಡನ್: ಅರಮನೆಯ ಅಂಗರಕ್ಷಕನೊಬ್ಬ ಬ್ರಿಟನ್ ರಾಣಿ ಎರಡನೇ ಎಲಿಝಬೆತ್ ಅವರು ಹತ್ಯೆ ಮಾಡಿಬಿಡುತ್ತಿದ್ದನು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕೆಲವು ವರ್ಷಗಳ ಹಿಂದೆ ಎಲಿಝಬೆತ್ ಅವರು ನಿದ್ದೆ ಬಾರದೆ ಮುಂಜಾನೆ 3 ಗಂಟೆ ಸಮಯದಲ್ಲಿ ಅರಮನೆ ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಕತ್ತಲಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದಾನೆ ಎಂದು ಭಾವಿಸಿ ಗುಂಡು ಹಾರಿಸಲು ಸಿದ್ಧನಾಗಿದ್ದೆ ಎಂದು ಮಾಜಿ ಅಂಗರಕ್ಷಕರೊಬ್ಬರು ಬಹಿರಂಗಪಡಿಸಿದ್ದಾರೆ.
ಟೈಮ್ಸ್ ದೈನಿಕ ಪತ್ರಿಕೆಯ ಡೈರಿ ಅಂಕಣದಲ್ಲಿ ಈ ವರದಿ ಪ್ರಕಟಗೊಂಡಿದೆ. ಅಂಗರಕ್ಷಕ ತನ್ನೆದುರು ಯಾರೋ ಅಪರಿಚಿತ ವ್ಯಕ್ತಿ ನಿಂತಿದ್ದಾನೆ ಎಂದು ಭಾವಿಸಿ ಯಾರದು? ಎಂದು ಅಬ್ಬರಿಸಿದೆ ಎಂದು ಅಂಕಣದಲ್ಲಿ ಅಂಗರಕ್ಷಕ ಹೇಳಿದ್ದಾರೆ.
ಆ ವ್ಯಕ್ತಿ ತಾನು ರಾಣಿ ಎಂದು ಹೇಳಿದಾಗ ನಾನು ದಂಗಾದೆ, ಅದಕ್ಕೆ ನಾನೂ ಬ್ಲಡಿ ಹೆಲ್! ಯುವರ್ ಮೆಜೆಸ್ಟಿ! ನಾನು ಈಗ ನಿಮಗೆ ಗುಂಡು ಹಾರಿಸಿಯೇ ಬಿಡುತ್ತಿದ್ದೆ ಎಂದು ನಾನು ಉದ್ಗರಿಸಿದೆ. ಇದಕ್ಕೆ ರಾಣಿ ಬೈಯಬಹುದು ಎಂದು ನಾನು ಅಂದುಕೊಂಡಿದ್ದೆ. ಅದಕ್ಕೆ ರಾಣಿ ಪರವಾಗಿಲ್ಲ ಮುಂದಿನ ಸಲ ನಾನು ನಿನಗೆ ಮುಂಚಿತವಾಗಿಯೇ ಹೇಳುತ್ತೇನೆ. ಆಗ ನೀನು ಗುಂಡು ಹಾರಿಸಬೇಕಾಗಿಲ್ಲ ಎಂದರು.
ಇನ್ನು ಆಗಸ್ಟ್ 2016ರಲ್ಲಿ 22 ವರ್ಷದ ಯುವಕನೊರ್ವ ಭದ್ರತಾ ಬೇಲಿಯನ್ನು ದಾಟಿ ಒಳಗೆ ಬಂದಿದ್ದು ಸಿಸಿಟಿವಿಯಲ್ಲಿ ಗಮನಿಸಿದ ಭದ್ರತಾ ಸಿಬ್ಬಂದಿ ಆತನನ್ನು ಬಂದಿಸಿದ್ದರು. ಅಂದಿನಿಂದ ಅರಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

Comments are closed.