ಅಂತರಾಷ್ಟ್ರೀಯ

‘ಹಿಂದೂ ವಿವಾದ ಕಾಯ್ದೆ’ಗೆ ಪಾಕಿಸ್ತಾನ ಸೆನೆಟ್ ಅನುಮೋದನೆ

Pinterest LinkedIn Tumblr

marrage

ಇಸ್ಲಾಮಾಬಾದ್: ಸುಪ್ರೀಂ ಆದೇಶದ ನಡುವೆಯೂ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸದೆ ತೀವ್ರ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಸೆನೆಟ್ ಸಮಿತಿ, ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಅನುಮೋದನೆ ನೀಡಿದ್ದು ಈ ಮೂಲಕ ಮಹತ್ವದ ನಿರ್ಧಾರವೊಂದನ್ನು ಮಂಗಳವಾರ ತೆಗೆದುಕೊಂಡಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಕೌಟುಂಬಿಕ ಕಾನೂನಿನ ಅವಕಾಶ ನೀಡುವ ಸಲುವಾಗಿ ಪಾಕಿಸ್ತಾನ ಸೆನೆಟ್ ಸಮಿತಿ ಹಿಂದೂ ವಿವಾಹ ಮಸೂದೆಯ ಕರಡನ್ನು ಅನುಮೋದಿಸಿದೆ.

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಇದೊಂದು ಮಹತ್ವದ ಮಸೂದೆಯಾಗಿದ್ದು. ಇನ್ನುಮುಂದೆ ಪಾಕಿಸ್ತಾನದಲ್ಲಿರುವ ಹಿಂದೂಗಳು ತಮ್ಮ ವಿವಾದ ನೋಂದಣಿಗೆ ಮತ್ತು ವಿಚ್ಛೇದನ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲು ಸಹಾಯಕವಾಗಲಿದೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂದೂ ವಿವಾಹ ಕಾಯ್ದೆ ಕರಡಿಗೆ ನ್ಯಾಷನಲ್ ಅಸೆಂಬ್ಲಿ ಅನುಮೋದನೆ ನೀಡಿತ್ತು. ನಾಲ್ಕು ತಿಂಗಳ ಬಳಿಕ ಸಂಸದ ನಸ್ರೀನ್ ಜಲೀಲ್ ನೇತೃತ್ವದ ಸೆನೆಟ್ ಮಾನವ ಹಕ್ಕುಗಳ ಕಾರ್ಯಕಾರಿ ಸಮಿತಿಯು ಮಸೂದೆಗೆ ಅವಿರೋಧವಾಗಿ ಅನುಮೋದನೆ ನೀಡಿದೆ. ಸಂಸತ್ ಮೇಲ್ಮನೆ ಸೆನೆಟ್ ಅಂಗೀಕಾರ ದೊರೆತ ಬಳಿಕ ‘ಹಿಂದೂ ವಿವಾಹ ಮಸೂದೆ 2016’ ಕಾಯ್ದೆ ರೂಪ ಪಡೆದುಕೊಳ್ಳಲಿದೆ.

ಅನುಮೋದನೆ ಪಡೆದುಕೊಂಡಿರುವ ಈ ಕಾಯ್ದೆಯು ದಂಪತಿಗಳು ಪರಸ್ಪರ ಪ್ರತ್ಯೇಕಗೊಂಡಾಗ ಮರುಮದುವೆಯಾಗಲು ಈ ಕಾಯ್ದೆ ಅನುಮತಿ ನೀಡಲಿದೆ. ಪತಿ ಮರಣದ 6 ತಿಂಗಳ ಬಳಿಕ ಸ್ವ ಇಚ್ಛೆಯಿಂದ ಮಹಿಳೆಯರು ಮತ್ತೊಂದು ಮದುವೆಯಾಗಲು ಈ ಮಸೂದೆ ಅವಕಾಶ ನೀಡಲಿದೆ.

Comments are closed.