ಅಂತರಾಷ್ಟ್ರೀಯ

2016ರಲ್ಲಿ 93 ಪತ್ರಕರ್ತರ ಹತ್ಯೆ

Pinterest LinkedIn Tumblr

murder-new
ಬ್ರಸೆಲ್ಸ್ (ಡಿ.31): 2016ರಲ್ಲಿ ವಿಶ್ವದಾದ್ಯಂತ 93 ಪತ್ರಕರ್ತರ ಹತ್ಯೆಯಾಗಿದೆ ಎಂದು ಪತ್ರಕರ್ತರ ಅಂತರಾಷ್ಟ್ರೀಯ ಒಕ್ಕೂಟ ತಿಳಿಸಿದೆ.
ಜಗತ್ತಿನಾದ್ಯಂತ 140 ದೇಶಗಳಲ್ಲಿ 6 ಲಕ್ಷಕ್ಕಿಂತ ಹೆಚ್ಚು ಸದಸ್ಯರಿರುವ ಪತ್ರಕರ್ತರ ಅಂತರಾಷ್ಟ್ರೀಯ ಒಕ್ಕೂಟವು (ಐಫ್’ಜೆ) ಪ್ರತಿವರ್ಷವೂ ಕುರಿತು ಅಂಕಿಅಂಶಗಳನ್ನು ಪ್ರಕಟಿಸುತ್ತಿದೆ.
ಕೆಲಸದ ವಿಚಾರದಲ್ಲಿ ಹತ್ಯೆಯಾದ, ಕೆಲಸ ಮಾಡುವಾಗ, ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ವರದಿಗಾರಿಕೆ ಮಾಡುವಾಗ ಬಾಂಬ್ ದಾಳಿ ಮುಂತಾದ ಘಟನೆಗಳಲ್ಲಿ ಹತ್ಯೆಯಾದ ಪತ್ರಕರ್ತರ ಸಂಖ್ಯೆಯನ್ನು ಈ ಅಂಕಿಅಂಶಗಳು ಒಳಗೊಂಡಿವೆ.
ಕಳೆದ ಬಾರಿಗೆ (2015) ಹೋಲಿಸಿದಾಗ ಈ ವರ್ಷ ಪತ್ರಕರ್ತರ ಹತ್ಯೆ ಪ್ರಕರಣದಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ 112 ಪತ್ರಕರ್ತರ ಹತ್ಯೆಯಾಗಿತ್ತು.
ಇದರ ಹೊರತು 2016ರಲ್ಲಿ ಬ್ರೆಝಿಲ್ ವಿಮಾನ ಅಪಘಾತದಲ್ಲಿ 20 ಮಂದಿ ಕ್ರೀಡಾ ವರದಿಗಾರರು ಮೃತಪಟ್ಟಿದ್ದರೆ, ರಷ್ಯಾದ ಮಿಲಿಟರಿ ವಿಮಾನ ಅಪಘಾತದಲ್ಲಿ ಒಂಬತ್ತು ಪತ್ರಕರ್ತರು ಮೃತಪಟ್ಟಿದ್ದರು.
ಭಾರತ ಹಾಗೂ ಪಾಕಿಸ್ತಾನದಲ್ಲಿ ಈ ವರ್ಷ ತಲಾ 5 ಪತ್ರಕರ್ತರ ಹತ್ಯೆಯಾಗಿದೆ ಎಂದು ಐಎಫ್’ಜೆ ವರದಿ ಹೇಳಿದೆ.

Comments are closed.