ಅಂತರಾಷ್ಟ್ರೀಯ

ವಿಮಾನದಲ್ಲಿ ಟ್ರಂಪ್ ಮಗಳೊಂದಿಗೆ ಪ್ರಯಾಣಿಕನ ಜಗಳ

Pinterest LinkedIn Tumblr

ivanka-jetblue
ನ್ಯೂಯಾರ್ಕ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ರೊಂದಿಗೆ ವಿಮಾನದ ಸಹ ಪ್ರಯಾಣಿಕನೊಬ್ಬ ಜಗಳ ತೆಗೆದು ಬಳಿಕ ವಿಮಾನದಿಂದ ಹೊರದಬ್ಬಿಸಿಕೊಂಡ ಘಟನೆ ನ್ಯೂಯಾರ್ಕ್ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಡೊನಾಲ್ಡ್ ಟ್ರಂಪ್ ಅವರ ಮಗಳಾದ ಇವಾಂಕ ಟ್ರಂಪ್ ಹಾಗೂ ಆಕೆಯ ಪತಿ ಜೇರ್ಡ್ ಕುಶ್ನರ್ ಅವರು ಪ್ರವಾಸಕ್ಕೆಂದು ನ್ಯೂಯಾರ್ಕ್ ನಿಂದ ಹವಾಯಿ ದ್ವೀಪಕ್ಕೆ ತೆರಳುತ್ತಿದ್ದರು. ಈ ವೇಳೆ ವಿಮಾನದಲ್ಲಿದ್ದ ಸಹ ಪ್ರಯಾಣಿಕನೋರ್ವ ಇವಾಂಕಾಳನ್ನು ನೋಡಿ ಅಲ್ಲೇ ಖ್ಯಾತೆ ತೆಗೆದಿದ್ದಾನೆ. ನಿನ್ನ ತಂದೆ ಡೊನಾಲ್ಡ್ ಟ್ರಂಪ್ ಈ ದೇಶವನ್ನು ಹಾಳುಗೆಡವಿದ್ದಾನೆ, ಇದೀಗ ನೀನು ಈ ವಿಮಾನವನ್ನು ಹಾಳುಗೆಡವಲು ಬಂದಿದ್ದೀಯಾ ಎಂದು ಜಗಳ ತೆಗೆದಿದ್ದಾನೆ. ವ್ಯಕ್ತಿ ವರ್ತನೆ ರೊಚ್ಚಿಗೆದ್ದ ಇವಾಂಕಾ ಕೂಡಲೇ ವಿಮಾನದ ಸಿಬ್ಬಂದಿಯನ್ನು ಕರೆದಿದ್ದಾರೆ.
ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಆ ವ್ಯಕ್ತಿಯನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆಯಾದರೂ ಅತ ಮಾತ್ರ ಸಮಾಧಾನಗೊಂಡಿಲ್ಲ. ಹೀಗಾಗಿ ಆತನನ್ನು ಬಲವಂತವಾಗಿ ವಿಮಾನದಿಂದ ಕೆಳಗಿಳಿಸಿ ವಿಮಾನ ಪ್ರಯಾಣ ಮುಂದುವರೆಸಿದೆ. ಇನ್ನು ಆ ಪ್ರಯಾಣಿಕನ ಪತ್ನಿ ಟ್ವಿಟರ್ ನಲ್ಲಿ ಈ ಬಗ್ಗೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದು, ಇವಾಂಕಾಳಿಗಾಗಿ ಬಲವಂತವಾಗಿ ನನ್ನ ಪತಿಯನ್ನು ಕೆಳಗಿಳಿಸಲಾಗಿದೆ ಎಂದು ದೂರಿದ್ದಾಳೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಟ್ ಬ್ಲೂ ಏರ್ ಲೈನ್ಸ್ ಸಂಸ್ಥೆ ಆ ಪ್ರಯಾಣಿಕನನ್ನು ನಾವು ಬಲವಂತವಾಗಿ ಕೆಳಗಿಳಿಸಿಲ್ಲ. ಬದಲಿಗೆ ಬೇರೊಂದು ವಿಮಾನದ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದೇವೆ ಎಂದು ಹೇಳಿದ್ದಾರೆ.

Comments are closed.