
ಅಲೆಪ್ಪೊ : ಯುದ್ಧ ಪೀಡಿತ ಸಿರಿಯಾದ ಅಲೆಪ್ಪೊ ನಗರವು ನರಕಸದೃಶವಾಗಿದ್ದು 3500 ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
50ಕ್ಕೂ ಹೆಚ್ಚು ಬಸ್‌ಗಳಲ್ಲಿ ಸಿರಿಯಾ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆಯ ಅಧಿಕೃತ ಮೂಲಗಳೂ ತಿಳಿಸಿವೆ.
ನಗರದಲ್ಲಿ ಉಳಿದುಕೊಂಡಿರುವ ಇನ್ನು ಕೆಲವು ನಾಗರಿಕರನ್ನು ಸ್ಥಳಾಂತರ ಮಾಡುತ್ತಿರುವ ಕೆಲಸ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಮನೆ ಮಠ ಕಳೆದುಕೊಂಡಿರುವ ಅಲೆಪ್ಪೊ ನಗರವಾಸಿಗಳಿಗೆ ನೀರು ಮತ್ತು ಆಹಾರ ಪೊಟ್ಟಣ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ವಿಶ್ವಸಂಸ್ಥೆ ತಿಳಿಸಿದೆ.
Comments are closed.