ನ್ಯೂಯಾರ್ಕ್: ಒಮ್ಮೆ ಕಳುಹಿಸಿದ ಸಂದೇಶವನ್ನು ಮರಳಿ ಪಡೆಯಲು ಮತ್ತು ಮತ್ತೆ ಎಡಿಟ್ ಮಾಡಲು ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸ್ಆಪ್ ಶೀಘ್ರ ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ. ಜಿಮೇಲ್ನಲ್ಲಿ ಲಭ್ಯವಿರುವ ಅಂಡೂ ಆಯ್ಕೆಯಂತೆಯೇ ಒಂದು ಬಾರಿ ಕಳುಹಿಸಿದ ಸಂದೇಶವನ್ನು ಬೇಡವೆಂದಾದಲ್ಲಿ ಹಿಂದಕ್ಕೆ ಪಡೆಯಬಹುದು, ಮತ್ತೆ ಎಡಿಟ್ ಮಾಡಿ ಕಳುಹಿಸಬಹುದು, ಹೀಗೆ ಹಿಂಪಡೆದ ಸಂದೇಶ ಕಳುಹಿಸಿದವರ ಮೊಬೈಲ್ನಲ್ಲೂ ಡಿಲೀಟ್ ಆಗಲಿದೆ. ಐಒಎಸ್ನ ಬೀಟಾ ಆವೃತ್ತಿ 2.17.1.869ಯಲ್ಲಿ ಈ ಆಯ್ಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ ಅಪ್ಡೇಟ್ನಲ್ಲಿ ವಾಟ್ಸ್ಆಪ್ ಬಳಕೆದಾರರಿಗೆ ಈ ಹೊಸ ಆಯ್ಕೆ ನೀಡಲಿದೆ ಎಂದು ತಿಳಿದುಬಂದಿದೆ. ಜತೆಗೆ ಗ್ರೂಪ್ ಚಾಟ್ಗಳನ್ನು ಇನ್ನಷ್ಟು ಉತ್ತಮಪಡಿಸಲು ವಾಟ್ಸ್ಆಪ್ ಪ್ರಯತ್ನಿಸುತ್ತಿದೆ. ಅಲ್ಲದೆ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯಲು ಸಾಧ್ಯವಾಗುವಂತೆ ವಾಟ್ಸ್ಆಪ್ ಕ್ಯಾಮರಾ ಆಯ್ಕೆ ನೀಡಲಿದೆ. ಕಳುಹಿಸಿದ ಸಂದೇಶವನ್ನು ಒತ್ತಿ ಹಿಡಿದಾಗ ಅಲ್ಲಿ ರಿವೋಕ್ ಎಂಬ ಆಯ್ಕೆ ದೊರೆಯಲಿದೆ.
ಅಂತರಾಷ್ಟ್ರೀಯ
Comments are closed.