ಅಂತರಾಷ್ಟ್ರೀಯ

ವೇಶ್ಯೆಯ ಬಳಿ ಹೋದ ವ್ಯಕ್ತಿ ತನ್ನ ಬಳಿ ಹಣವಿಲ್ಲ 2 ಬೇಯಿಸಿದ ಮೊಟ್ಟೆ ಕೊಡುತ್ತೇನೆ ಎಂದಿದ್ದಕ್ಕೆ ಏನಾಯಿತು ಗೊತ್ತಾ…?

Pinterest LinkedIn Tumblr

zimbabve

ಹರಾರೆ: ಜಿಂಬಾಬ್ವೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ವಿಟಪುರುಷನೊಬ್ಬ ವೇಶ್ಯೆಯ ಬಳಿ ಹಣವಿಲ್ಲ 2 ಬೇಯಿಸಿದ ಮೊಟ್ಟೆ ಕೊಡುತ್ತೇನೆ ಆದೀತಾ ಎಂದು ಕೇಳಿ ಮುಖ ಮೂತಿ ಅಪ್ಪಚ್ಚಿ ಮಾಡಿಕೊಂಡಿದ್ದಾನೆ.

ಮೋಸಸ್‌ಮುಶಾಂಗಾ ಎಂಬ 28 ರ ಹರೆಯದ ಯುವಕ ರಾತ್ರಿ ವೇಳೆ ಮಶೋನಾಲ್ಯಾಂಡ್‌ಪ್ರಾಂತ್ಯದ ಮುರ್ವಿ ಎಂಬಲ್ಲಿ ವೇಶ್ಯೆಯೊಬ್ಬಳ ಮನೆಗೆ ಕೈಯಲ್ಲಿ ಕಾಸಿಲ್ಲದೆ ಬರೀ 2 ಮೊಟ್ಟೆಗಳನ್ನು ಹಿಡಿದುಕೊಂಡು ತೆರಳಿ ಸುಃಖ ಕೇಳಿದ್ದಾನೆ.

ಆಕೆ ನನಗೆ ಮೊಟ್ಟೆ ಸಾಕಾಗುವುದಿಲ್ಲ. ಹಣವೇ ಆಗಬೇಕು ಹಾಗಿದ್ದರೆ ಮಾತ್ರ ನಾನು ಸಿದ್ದ ಎಂದಿದ್ದಾಳೆ. ಅಲ್ಲಿಗಾಗಲೇ ಕಾಮೊದ್ರೇಕನಾಗಿದ್ದ ಮುಶಾಂಗಾ ಆಕೆಯ ಮೈಗೆ ಕೈಹಾಕಿ ಕಂಚುಕವನ್ನು ಹಿಡಿದೆಳೆದಿದ್ದಾನೆ.

ರೊಚ್ಚಿಗೆದ್ದ ಆಕೆ ಅಲ್ಲೆ ಬಳಿಯಿಂದ ಬಿಯರ್‌ಬಾಟಲಿ ಕೈಗೆತ್ತಿಕೊಂಡು ಮುಶಾಂಗಾನ ತಲೆಯ ಮೇಲೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ಬಾಟಲಿ ಪುಡಿ ಪುಡಿಯಾಗಿದ್ದು, ಮುಶಾಂಗನ ಮುಖದಿಂದ ರಕ್ತದ ಧಾರೆ ಹರಿದು ಬರುತ್ತಿತ್ತು.

ಈ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಸಿಕೊಂಡು ಬಂದ ಮುಶಾಂಗ ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ‘ಆಕೆ ಇಲ್ಲ ಎಂದಿದ್ದರೆ ಆಗುತ್ತಿತ್ತು, ಈ ರೀತಿ ಹೊಡೆಯುವ ಅಗತ್ಯವಿರಲಿಲ್ಲ’ಎಂದಿದ್ದಾನೆ.

ಜಿಂಬಾಬ್ವೆಯಲ್ಲಿ ವೇಶ್ಯೆಯರ ದರಗಳು( 0.8 ಜಿಂಬಾಬ್ವೆ ಡಾಲರ್‌) ಅರ್ಧ ಪ್ಯಾಕೇಟ್‌ಬ್ರೆಡ್‌ಬೆಲೆಗಿಂತಲೂ ಕಡಿಮೆ ಎಂದು ತಿಂಗಳ ಹಿಂದೆ ವಿಕೇಂಡ್‌ಪೋಸ್ಟ್‌ಸುದ್ದಿ ಪತ್ರಿಕೆ ವರದಿ ಮಾಡಿತ್ತು. ಅದೇ ಸುದ್ದಿಗೆ ಕಾಕತಾಳೀಯವೋ ಎಂಬಂತೆ ಈ ಘಟನೆ ನಡೆದಿದೆ.

Comments are closed.