ಅಂತರಾಷ್ಟ್ರೀಯ

ವಿಶ್ವಸಮುದಾಯದ ವೇದಿಕೆಗೆ ವಿದಾಯ ಹೇಳಿದ ಒಬಾಮ!

Pinterest LinkedIn Tumblr
President Barack Obama speaks about his signature health care law, Thursday, Nov. 14, 2013, in the Brady Press Briefing Room of the White House in Washington. Bowing to pressure, President Barack Obama intends to permit continued sale of individual insurance plans that have been canceled because they failed to meet coverage standards under the health care law, officials said Thursday. (AP Photo/Charles Dharapak)
Barack Obama 

ಲಿಮಾ: ಸತತ 8 ವರ್ಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬರಾಕ್ ಒಬಾಮ ಅವರು ಭಾನುವಾರ ಅಧಿಕೃತವಾಗಿ ವಿಶ್ವಸಮುದಾಯದ ವೇದಿಕೆಗೆ ವಿದಾಯ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಪೆರು ದೇಶದಲ್ಲಿ ಅಂತಿಮ ವಿದೇಶ ಪ್ರವಾಸವನ್ನು ಭಾನುವಾರ ಪೂರ್ಣಗೊಳಿಸಿದ ಬರಾಕ್ ಒಬಾಮ ವಿಶ್ವ ವೇದಿಕೆಗೆ ಅಂತಿಮ ವಿದಾಯ ಹೇಳಿದರು. ಅಮೆರಿಕ ಅಧ್ಯಕ್ಷರಾಗಿ ತಮ್ಮ ಅಂತಿಮ ವಿದೇಶ ಪ್ರವಾಸವನ್ನು ಪೆರುವಿನಲ್ಲಿ ಪೂರ್ಣಗೊಳಿಸಿದ ಒಬಾಮ, ತಮ್ಮ ಆಡಳಿತ ಹಾಗೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ಜೀವನದ ಕುರಿತು ಹಲವು ಮಹತ್ವ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಪೆರು ರಾಜಧಾನಿ ಲಿಮಾದಲ್ಲಿ ತಮ್ಮ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಒಬಾಮ, ಜಾಗತೀಕರಣದ ಮೂಲಕ ಸಮೃದ್ಧಿ, ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳಲ್ಲಿ ಐತಿಹಾಸಿಕ ಅಭಿವೃದ್ಧಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಅಮೆರಿಕನ್ನರನ್ನು ಕುರಿತು ಮಾತನಾಡಿದ ಒಬಾಮ, ಉದ್ಯೋಗಾವಕಾಶ ಮತ್ತು ಆದಾಯ ಯಾವಾಗ ದೇಶದ ಗಡಿದಾಟುತ್ತದೆಯೋ, ಯಾವಾಗ ಕಾರ್ಮಿಕರು ಕೆಲಸವಿಲ್ಲದೆ ಇರುತ್ತಾರೆಯೋ, ಸಂಪತ್ತಿನ ಸಹಕಾರ ನೀತಿ ನಿಯಮಾವಳಿಗೆ ಒಳಪಟ್ಟು ನಿಯಂತ್ರಣ ತಪ್ಪುತ್ತದೆಯೋ ಆಗ ನಿಜಕ್ಕೂ ಕಾರ್ಮಿಕರು ಹಾಗೂ ಸಮುದಾಯಗಳಿಗೆ ಕಠಿಣ ಪರಿಸ್ಥಿತಿ ಎದುರಾಗುತ್ತದೆ. ನನ್ನ ಅಭಿಪ್ರಾಯದಂತೆ ಜಾಗತಿಕ ಆರ್ಥಿಕತೆಯ ಲಾಭಾಂಶ ವಿಶ್ವಸಮುದಾಯದೊಂದಿಗೆ ಹಂಚಿಕೆಯಾಗಬೇಕು ಎಂದು ಹೇಳಿದರು.
ಟ್ರಂಪ್-ಒಬಾಮ ಭಿನ್ನಾಭಿಪ್ರಾಯ
ಇದೇ ವೇಳೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಂತೆ ಮಾತನಾಡಿದ ಒಬಾಮ, ಟ್ರಂಪ್ ಅವರ ಆಡಳಿತವನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು. ಹಲವು ವಿಚಾರಗಳಲ್ಲಿ ಟ್ರಂಪ್ ಹಾಗೂ ಒಬಾಮ ನಡುವೆ ಭಿನ್ನಾಭಿಪ್ರಾಯಗಳಿದ್ದು, ಟ್ರಂಪ್ ವಿರೋಧದ ನಡುವೆಯೇ ಐತಿಹಾಸಿಕ ಏಷ್ಯಾ-ಫೆಸಿಫಿಕ್ ಒಪ್ಪಂದ ಜೀವಂತವಾಗಿದೆ. ಅದೇ ರೀತಿ ತಾವು ಅಧಿಕಾರ ತೊರೆಯುವ ಮೊದಲು ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಒಬಾಮ ಹೇಳಿದ್ದಾರೆ.
ಗನ್ ಸಂಸ್ಕೃತಿ ನಿಷೇಧ ಸಾಧ್ಯವಾಗಲಿಲ್ಲ: ಒಬಾಮ ವಿಷಾಧ
ಅಂತೆಯೇ ಅಮೆರಿದಲ್ಲಿನ ಗನ್ ಸಂಸ್ಕೃತಿಗೆ ತಿಲಾಂಜಲಿ ಹಾಡುವ ಕುರಿತು ಮಾತನಾಡುತ್ತಿದ್ದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆಡಳಿತಾವಧಿಯಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಅಂತೆಯೇ ಕಾರ್ಮಿಕರ ಕನಿಷ್ ವೇತನ ಏರಿಕೆ ಮತ್ತು ಮೂಲಭೂತ ಖರ್ಚು ವಿಚಾರದಲ್ಲಿ ತಮ್ಮ ಸರ್ಕಾರಕ್ಕೆ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಆದರೂ ತಾವು ನೀಡಿದ ಆಶ್ವಾಸನೆಗಳಲ್ಲಿ ಬಹುತೇಕ ಆಶ್ವಾಸನೆಗಳನ್ನು ತಾವು ಈಡೇರಿಸಿರುವ ಹೆಮ್ಮೆ ತಮಗಿದೆ ಎಂದು ಒಬಾಮ ಹೇಳಿದರು.
ಸಿರಿಯಾ ಬಿಕ್ಕಟ್ಟು ನೆನೆದ ಒಬಾಮ
ಇದೇ ವೇಳೆ ತಮ್ಮ ಆಡಳಿತಾವಧಿಯಲ್ಲೇ ಸಿರಿಯಾ ಬಿಕ್ಕಟ್ಟನ್ನು ಅತ್ಯಂತ ಕ್ಲಿಷ್ಟಕರ ಸಮಸ್ಯೆ ಎಂದು ಬಿಂಬಿಸಿದ ಒಬಾಮ, ನಾನು ಸಿರಿಯಾದ ಶಾಶ್ವದ ಉಜ್ವಲ ಭವಿಷ್ದ ಬಗ್ಗೆ ಆಶಾವಾದ ಹೊಂದಿದ್ದೆ ಎಂದು ಹೇಳಿದ್ದಾರೆ. ಇದೇ ವೇಳೆ ಸಿರಿಯಾದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿರುವ ಬಷರ್ ಅಲ್ ಅಸದ್ ಅವರ ತಂಡದ ಬೆಂಬಲಕ್ಕೆ ನಿಂತಿರುವ ರಷ್ಯಾ ಹಾಗೂ ಇರಾನ್ ದೇಶಗಳನ್ನು ಒಬಾಮ ತರಾಟೆಗೆ ತೆಗೆದುಕೊಂಡರು.
ಒಟ್ಟಾರೆ ಅಮೆರಿಕ ಅಧ್ಯಕ್ಷರ ಇತಿಹಾಸದಲ್ಲೇ ಸಾಕಷ್ಟು ಹೆಜ್ಜೆಗುರುತುಗಳನ್ನು ಬರಾಕ್ ಒಬಾಮ ಉಳಿಸಿ ಹೋಗುತ್ತಿದ್ದು, ಎಲ್ಲಾ ವಿಶ್ವ ವೇದಿಕೆಯಲ್ಲೂ ಒಬಾಮ ನಿಜಕ್ಕೂ ಕೇಂದ್ರ ಬಿಂದುವಾಗಿದ್ದರು. 2008ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಒಬಾಮ ಮೊದಲ ಕಪ್ಪುವರ್ಣೀಯ ಅಧ್ಯಕ್ಷ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.

Comments are closed.