ಅಂತರಾಷ್ಟ್ರೀಯ

ಈ ಹಳ್ಳಿಯಲ್ಲಿ ಎಲ್ಲರೂ ಆಗರ್ಭ ಶ್ರೀಮಂತರು!

Pinterest LinkedIn Tumblr

chinaಚೀನಾದಲ್ಲೊಂದು ಗ್ರಾಮವಿದೆ. ಅದು ಹೇಗಿದೆ ಎಂದು ಕೇಳಿದರೆ ಬಚ್ಚಿ ಬೀಳುತ್ತೀರಿ. 72 ಅಂತಸ್ತಿನ ಗನನ ಚುಂಬಿ ಕಟ್ಟಡ, ಹೆಲಿಕಾಪ್ಟರ್‌ ಟ್ಯಾಕ್ಸಿಗಳು, ಐಷಾರಾಮಿ ವಿಲ್ಲಾಗಳು, ಐಷಾರಾಮಿ ಹೋಟೆಲ್‌ ಏನುಂಟು ಏನಿಲ್ಲ. ಅಂದಹಾಗೆ ಗ್ರಾಮದ ಪ್ರತಿಯೊಬ್ಬ ನಿವಾಸಿಗಳೂ ಆಗರ್ಭ ಶ್ರೀಮಂತರು. ಗ್ರಾಮದಲ್ಲಿ ಸುಮಾರು 2000 ನಿವಾಸಿಗಳಿದ್ದು ಪ್ರತಿಯೊಬ್ಬರ ಖಾತೆಯಲ್ಲೂ ಸರಾಸರಿ ಒಂದು ಕೋಟಿ ರೂ.ಗಳಷ್ಟು ಹಣವಿದೆ. ಈ ಗ್ರಾಮದಲ್ಲಿ ಬಂದು ಉಳಿದುಕೊಂಡವರಿಗೆ ಸ್ಥಳೀಯ ಆಡಳಿತವೇ ಕಾರು ಮತ್ತು ಮನೆಗಳನ್ನು ನೀಡಿದೆ. ಆದರೆ, ಒಂದು ಷರತ್ತು ನಿವಾಸಿಗಳು ಈ ಗ್ರಾಮವನ್ನು ತೊರೆದರೆ ಬರಿಗಯ್ಯಲ್ಲಿ ಹೋಗಬೇಕಾಗತ್ತದೆ.

ಈ ಗ್ರಾಮದ ಹೆಸರು ಹ್ಯಾಕ್ಸಿ. ಜಿಯಾಂಕ್ಸು ಪ್ರಾಂತ್ಯದಲ್ಲಿದೆ. ಇಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ಅತ್ಯಂತ ಕಠಿಣವಾಗಿ ಜಾರಿ ಮಾಡಲಾಗಿದೆ. ಕಳೆದ ತಿಂಗಳು ಈ ಗ್ರಾಮ 55ನೇ
ವರ್ಷಾಚರಣೆಯನ್ನು ಆಚರಿಸಿಕೊಂಡಿದೆ. ಇದು ಚೀನಾದ ಅತ್ಯಂತ ಶ್ರೀಮಂತ ಗ್ರಾಮ ಎಂದೇ ಕರೆಸಿಕೊಂಡಿದೆ.

ಗ್ರಾಮದ ಹೋಟೆಲ್‌ನಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ 8.50 ಲಕ್ಷ ರೂ. ದರ ವಿಧಿಸಲಾಗುತ್ತದೆ. ಶಾಂಘೈ ನಿಂದ ಕೇವಲ 2 ತಾಸಿನ ಹಾದಿ ಕ್ರಮಿಸಿದರೆ ಈ ಗ್ರಾಮವನ್ನು ತಲುಪಬಹುದು. ಈ ಗ್ರಾಮ ಕಮ್ಯುನಿಸ್ಟ್‌ ಆಡಳಿತದ ಯಶಸ್ಸಿಗೆ ಹಿಡಿದ ಕೈಗನ್ನಡಿಯಂತಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಾರೆ. ಆದರೆ, ಇಲ್ಲಿನ ನಿವಾಸಿಗಳು ಏನು ಕೆಲಸ ಮಾಡುತ್ತಾರೆ. ಗ್ರಾಮಕ್ಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಎನ್ನುವ ರಹಸ್ಯವನ್ನು ಯಾರೂ ಬಾಯಿಬಿಡುವಂತಿಲ್ಲ. ಗ್ರಾಮದ ನಿವಾಸಿಗಳ ವಾರ್ಷಿಕ ಸರಾಸರಿ ವೇತನ 11. 87 ಲಕ್ಷ ರೂ. ಎಂದು ಹ್ಯಾಕ್ಸಿ ಆಡಳಿತಾಧಿಕಾರಿಗಳು ಪ್ರಕಟಿಸಿದ್ದಾರೆ.

ಈ ಗ್ರಾಮವನ್ನು ಪ್ರವೇಶಿಸಲು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಅಧಿಕಾರಿಗಳ ಅನುಮತಿ ಇಲ್ಲದೇ ಗ್ರಾಮವನ್ನು ಪ್ರವೇಶಿಸುವುದು ಕೂಡ ಅಸಾಧ್ಯ. ಅಷ್ಟರ ಮಟ್ಟಿಗೆ ರಹಸ್ಯವನ್ನು ಕಾಯ್ದುಕೊಳ್ಳಲಾಗಿದೆ. ಈ ಗ್ರಾಮದಲ್ಲಿ ಐಷಾರಾಮಿ ಸಾರಿಗೆ ವ್ಯವಸ್ಥೆ ಇದೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು ಕಾರಿನ ಬದಲು ಹೆಲಿಕಾಪ್ಟರ್‌ ಅನ್ನೇ ನೀಡಲಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ನಗರಗಳನ್ನು ಕೇವಲ 10 ನಿಮಿಷದಲ್ಲಿ ತಲುಪಬಹುದು.

Comments are closed.