ಅಂತರಾಷ್ಟ್ರೀಯ

ಅಮೇರಿಕಾದಲ್ಲಿ ಟ್ರಂಪ್‌ ಆಡಳಿತ; ಭಾರತ-ಇನ್ನಿತರ ದೇಶಗಳಿಗೆ ಆಗುವ ಲಾಭ-ನಷ್ಟ …

Pinterest LinkedIn Tumblr

trump-new

ನವದೆಹಲಿ : ಡೊನಾಲ್ಡ್‌ಟ್ರಂಪ್‌ಅವರ ಆಡಳಿತದಲ್ಲಿ ಭಾರತದ ಸಾಫ್ಟ್‌ವೇರ್‌ ಮತ್ತು ಹೊರ ಗುತ್ತಿಗೆ ಉದ್ಯಮಗಳಿಗೆ ಕಷ್ಟವಾಗಬಹುದು ಎಂಬ ಭಾವನೆ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವ್ಯಾಪಕವಾಗಿತ್ತು. ಆದರೆ ಜನರು ಭಾವಿಸಿದಷ್ಟು ತೀವ್ರವಾದ ರೀತಿಯಲ್ಲಿ ಪರಿಣಾಮ ಉಂಟಾಗದು ಎಂದು ಪರಿಣತರು ಹೇಳಿದ್ದಾರೆ.

ಜಗತ್ತಿನ ಇತಿಹಾಸದಲ್ಲಿಯೇ ದೊಡ್ಡ ಕೆಲಸ ಕಸಿದುಕೊಳ್ಳುವಿಕೆ ಯುಗದಲ್ಲಿ ಅಮೆರಿಕ ಇದೆ. ಕಂಪೆನಿಗಳು ಕೆಲಸಗಳನ್ನು ಭಾರತ, ಚೀನಾ, ಮೆಕ್ಸಿಕೊಗಳಿಗೆ ಸಾಗಿಸುತ್ತಿವೆ ಎಂದು ಟ್ರಂಪ್‌ಹೇಳಿದ್ದರು.

ಐಬಿಎಂ ಕಂಪೆನಿ ಮಿನಿಯಪೊಲಿ ಸ್‌ನಲ್ಲಿ ಅಮೆರಿಕದ 500 ಕೆಲಸಗಾರ ರನ್ನು ವಜಾ ಮಾಡಿ ಈ ಉದ್ಯೋ ಗಗಳನ್ನು ಭಾರತಕ್ಕೆ ವರ್ಗಾಯಿಸಿದೆ ಎಂದು ಅವರು ಆರೋಪಿಸಿದ್ದರು. ತಾವು ಅಧಿಕಾರಕ್ಕೆ ಬಂದರೆ ಇಂತಹ ಕಂಪೆನಿಗಳ ಮೇಲೆ ಶೇ 35ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು.

‘ಚುನಾವಣಾ ಪ್ರಚಾರದ ಸಂದರ್ಭ ದಲ್ಲಿ ಟ್ರಂಪ್ ಪ್ರತಿಪಾದಿಸಿದ ನಿಲುವು ಜಾರಿಗೆ ತಂದರೆ ಭಾರತದ ಸಾಫ್ಟ್‌ವೇರ್‌ಮತ್ತು ಹೊರಗುತ್ತಿಗೆ ವ್ಯವಹಾರಗಳಿಗೆ ಕಷ್ಟವಾಗಬಹುದು. ಅಮೆರಿಕದಿಂದ ಭಾರತಕ್ಕೆ ಈ ಮೂಲಕ ಬರುವ ಭಾರಿ ಪ್ರಮಾಣದ ಹಣದ ಗಣನೀಯವಾಗಿ ಕುಸಿಯಬಹುದು’ ಎಂದು ಅ್ಯಂಟಲ್‌ಇಂಟರ್‌ನ್ಯಾಷನಲ್‌ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್‌ದೇವಸಿಯ ಹೇಳಿದ್ದಾರೆ.

‘ಅಮೆರಿಕದ ರಕ್ಷಣೆಯ ಭರವಸೆ ನೀಡಿ ಟ್ರಂಪ್‌ಗೆದ್ದಿದ್ದಾರೆ. ಸ್ವೀಕಾರ ಮಾಡಿದ ನಂತರ ಅವರೊಳಗಿನ ಉದ್ಯಮಿ ಎಚ್ಚರಗೊಳ್ಳಬಹುದು’ ಎಂದು ಟೀಮ್‌ಲೀಸ್‌ಸಂಸ್ಥೆಯ ಉಪಾ ಧ್ಯಕ್ಷೆ ರಿತುಪರ್ಣಾ ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.

ಆಘಾತ ವ್ಯಕ್ತಪಡಿಸಿದ ಹಾಲಿವುಡ್
ಲಾಸ್‌ಏಂಜಲೀಸ್ : ಕೋಟ್ಯಧೀಶ, ಉದ್ಯಮಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹಾಲಿವುಡ್‌ನ ಖ್ಯಾತನಾಮರು ಆಘಾತ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್‌ಪ್ರಮುಖರಲ್ಲಿ ಹಲವರು ಚುನಾವಣೆಗೂ ಮುನ್ನ, ಹಿಲರಿ ಕ್ಲಿಂಟನ್ ಪರ ನಿಲುವು ತಾಳಿದ್ದರು. ಈಗ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ನಿರಾಸೆಯನ್ನು ಹೊರಹಾಕುತ್ತಿದ್ದಾರೆ.

‘ಹದಿನೈದು ವರ್ಷಗಳಿಂದ ಇಲ್ಲಿದ್ದೇನೆ. ಆದರೆ, ಈಗ ಅನುಭವಿಸುತ್ತಿರುವಂತಹ ಭಯವನ್ನು ಹಿಂದೆಂದೂ ಅನುಭವಿಸಿರಲಿಲ್ಲ’ ಎಂದು ಭಾರತೀಯ ಮೂಲದ ಅಮೆರಿಕನ್ ತಾರೆ ಕುನಾಲ್ ನಯ್ಯರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ವಲಸಿಗರ ಬಗ್ಗೆ ಟ್ರಂಪ್ ಹೊಂದಿರುವ ಬಿಗಿ ನಿಲುವಿನ ಕುರಿತು ನಯ್ಯರ್ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ನೀತಿ: ಪರಿಣಾಮ
* ತೆರಿಗೆ ಕಡಿತ: ಉದ್ಯಮ ತೆರಿಗೆಯನ್ನು ಶೇ 15ಕ್ಕೆ ಇಳಿಸುವುದಾಗಿ ಟ್ರಂಪ್‌ ಭರವಸೆ ನೀಡಿದ್ದಾರೆ. ಈಗ ಅದು ಶೇ 35ರಷ್ಟು ಇದೆ. ಈ ಭರವಸೆ ಕಾರ್ಯರೂಪಕ್ಕೆ ಬಂದರೆ ಭಾರತದಿಂದ ಕಾರ್ಯಾಚರಿಸುವ ಅಮೆರಿಕದ ಕಂಪೆನಿಗಳು ಸ್ವದೇಶಕ್ಕೆ ಮರಳಬಹುದು. ಫೋರ್ಡ್‌ನಂತಹ ಕಂಪೆನಿಗಳ ಭಾರತದ ಘಟಕಗಳಲ್ಲಿ ಸಾವಿರಾರು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟವಾದರೆ ಜನರಿಗೆ ಉದ್ಯೋಗ ನಷ್ಟವಾಗಬಹುದು.

* ಚೀನಾ ವಿರೋಧ: ಚುನಾವಣಾ ಪ್ರಚಾರದಲ್ಲಿ ಚೀನಾದ ಮೇಲೆ ಮಾಡಿದಷ್ಟು ದಾಳಿಯನ್ನು ಟ್ರಂಪ್ ಬೇರೆ ಯಾರ ಮೇಲೂ ಮಾಡಿಲ್ಲ. ಅಮೆರಿಕದಲ್ಲಿ ಚೀನಾ ಸಾವಿರಾರು ಕೋಟಿ ಡಾಲರ್‌ವಹಿವಾಟು ನಡೆಸುತ್ತಿದೆ. ಚೀನಾದ ವಿರುದ್ಧ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡುವುದಾಗಿ, ಅವರ ವ್ಯಾಪಾರದ ಮೇಲೆ ಭಾರಿ ತೆರಿಗೆ ಹೇರುವುದಾಗಿ ಟ್ರಂಪ್‌ಗುಡುಗಿದ್ದಾರೆ. ಹಾಗಾದರೆ ಚೀನಾಕ್ಕೆ ಅಲ್ಲಿ ವ್ಯಾಪಾರ ನಡೆಸುವುದು ಕಷ್ಟವಾಗುತ್ತದೆ. ಹೀಗೆ ತೆರವಾದ ಅವಕಾಶ ಭಾರತದ ಪಾಲಾಗುವ ಸಾಧ್ಯತೆ ಇದೆ.

* ವಲಸೆ ಬಗ್ಗೆ ಅತ್ಯಂತ ತೀವ್ರವಾದಿ ನಿಲುವು: ವಲಸಿಗರ ಪ್ರಮಾಣ ಕಡಿಮೆಯಾಗಿ ಅಮೆರಿಕನ್ನರಿಗೆ ಹೆಚ್ಚು ಉದ್ಯೋಗ ದೊರೆಯಬೇಕು ಎಂದು ಟ್ರಂಪ್‌ಹೇಳುತ್ತಾರೆ. ಹಾಗಾಗಿ ಭಾರತದ ಐಟಿ ಕಂಪೆನಿಗಳಿಗೆ ಇದು ಕಹಿ ಸುದ್ದಿ. ಆರಂಭದಲ್ಲಿ ಎಚ್‌ಬಿ (ಕೆಲಸದ ವೀಸಾ) ವೀಸಾವನ್ನು ಅವರು ವಿರೋಧಿಸಿದ್ದರು. ನಂತರ ಭಾರತ ಮೂಲದವರ ಬೆಂಬಲ ಪಡೆಯುವುದಕ್ಕಾಗಿ ತಮ್ಮ ನಿಲುವು ಸಡಿಲಿಸಿದರು. ಸಾಮಾನ್ಯವಾಗಿ ಪ್ರತಿ ಅಧ್ಯಕ್ಷೀಯ ಅಭ್ಯರ್ಥಿಯೂ ಈ ವೀಸಾವನ್ನು ವಿರೋಧಿಸುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಅದು ಅವರ ಕೆಲಸದಲ್ಲಿ ಪ್ರತಿಫಲಿಸುವುದಿಲ್ಲ ಎಂಬ ಸಮಾಧಾನ ಭಾರತದ ಐಟಿ ಕಂಪೆನಿಗಳಲ್ಲಿ ಇದೆ.

* ಆರ್ಥಿಕತೆಗೆ ಉತ್ತೇಜನ: ಒಟ್ಟು ದೇಶೀ ಉತ್ಪನ್ನವನ್ನು (ಜಿಡಿಪಿ) ಶೇ 4ರಷ್ಟು ಏರಿಕೆ ಮಾಡಿ 2.5 ಕೋಟಿ ಉದ್ಯೋಗ ಸೃಷ್ಟಿಯ ಗುರಿಯನ್ನು ಅವರು ಹೊಂದಿದ್ದಾರೆ. ಇದು ಅಮೆರಿಕದಲ್ಲಿ ಹೂಡಿಕೆ ಅವಕಾಶ ಹೆಚ್ಚಿಸುತ್ತದೆ. ದೊಡ್ಡ ಉದ್ಯಮ ಸಂಸ್ಥೆಗಳು ಮಾತ್ರವಲ್ಲದೆ ಸಣ್ಣ ಕಂಪೆನಿಗಳೂ ಇದರ ಪ್ರಯೋಜನ ಪಡೆಯುವುದಕ್ಕೆ ಅವಕಾಶ ಇದೆ.

* ಭಯೋತ್ಪಾದನೆ ವಿರುದ್ಧ ಆಕ್ರೋಶ: ವಿಶೇಷವಾಗಿ ಇಸ್ಲಾಮಿಕ್‌ಸ್ಟೇಟ್‌(ಐಎಸ್‌) ಭಯೋತ್ಪಾದಕರ ಬಗ್ಗೆ ಟ್ರಂಪ್‌ಭಾರಿ ಸಿಟ್ಟು ವ್ಯಕ್ತಪಡಿಸಿದ್ದಾರೆ. ‘ಇಸ್ಲಾಮಿಕ್ ಭಯೋತ್ಪಾದನೆ’ ಮಟ್ಟ ಹಾಕಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಹೇಳಿದ್ದಾರೆ. ಭಾರತದ ಯುವಕರು ಐಎಸ್‌ನತ್ತ ಆಕರ್ಷಿತರಾದ ಹಲವು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಐಎಸ್‌ವಿರುದ್ಧ ಟ್ರಂಪ್‌ ಕೈಗೊಳ್ಳುವ ಕ್ರಮಗಳು ಭಾರತಕ್ಕೂ ಪ್ರಯೋಜನಕಾರಿ ಆಗಬಹುದು.

Comments are closed.