ಅಂತರಾಷ್ಟ್ರೀಯ

5100 ಉಗ್ರರ ಬ್ಯಾಂಕ್ ಖಾತೆಗಳು ಸ್ಥಗಿತ

Pinterest LinkedIn Tumblr

bankಇಸ್ಲಾಮಾಬಾದ್(ಅ.25): ಅಂತೂ ಪಾಕಿಸ್ತಾನ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಧಾನಿ ನವಾಜ್ ಷರೀಪ್ , ಜೈಷ್-ಎ-ಮೊಹಮ್ಮದ್ ಸಂಘಟನೆ ಸೇರಿದಂತೆ ಶಂಕಿತ 5100 ಉಗ್ರರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ದಲ್ಲಿ 1200 ಶಂಕಿತ ಉಗ್ರರ ಖಾತೆಗಳು ಪತ್ತೆಯಾಗಿದ್ದು, ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆ ನಿಗ್ರಹ ದಳ ಕಾಯ್ದೆ 1997ರ ಕಾಯ್ದೆ ಅನ್ವಯ 5100 ಉಗ್ರರ ಹಣಕಾಸಿನ ವಹಿವಾಟಿಗೆ ಕಡಿವಾಣ ಹಾಕಲಾಗಿದೆ. ಮೌಲಾನಾ ಮಸೂದ್ ಅಜರ್‌ನನ್ನು ಉಗ್ರರ ಎ ಗುಂಪಿನಲ್ಲಿ ಸೇರಿಸಲಾಗಿದೆ. ಪಠಾನ್‌ಕೋಟ್ ಉಗ್ರರ ದಾಳಿಯಲ್ಲಿ ಮಸೂದ್ ಅಜರ್ ಕೈವಾಡವಿದೆ ಎಂದು ಭಾರತ ಸರಕಾರ ಆರೋಪಿಸಿದ ಹಿನ್ನೆಲೆಯಲ್ಲಿ ಮಸೂದ್ ಅಜರ್‌ನನ್ನು ಗೃಹಬಂಧನದಲ್ಲಿರಿಸಲಾಗಿದ್ದು ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.

Comments are closed.