ಅಂತರಾಷ್ಟ್ರೀಯ

ಅತ್ಯಾಚಾರಿ ತಂದೆಗೆ 1,503 ವರ್ಷ ಶಿಕ್ಷೆ

Pinterest LinkedIn Tumblr

jail-prison-inmate-web-generic1ಕ್ಯಾಲಿಫೋರ್ನಿಯಾ: ನಾಲ್ಕು ವರ್ಷಗಳ ಕಾಲ ತನ್ನ ಹದಿಹರೆಯದ ಮಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ಅಪ್ಪನಿಗೆ 1,503 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕ್ಯಾಲಿಫೋರ್ನಿಯಾದ ಫ್ರೆನ್ಸೋ ನಗರ ನಿವಾಸಿ 41ರ ಹರೆಯದ ವ್ಯಕ್ತಿಗೆ ಫ್ರೆನ್ಸೋ ನ್ಯಾಯಾಲಯ ಈ ರೀತಿಯ ಶಿಕ್ಷೆ ವಿಧಿಸಿರುವುದಾಗಿ ಫ್ರೆನ್ಸೋ ಬೀ ಸುದ್ದಿ ಪತ್ರಿಕೆ ವರದಿ ಮಾಡಿದೆ.

ಈ ವ್ಯಕ್ತಿಯ ಮಗಳ ಮೇಲೆ ಕುಟುಂಬದ ಆಪ್ತರೊಬ್ಬರು ಮೊದಲ ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದರು.ಆ ಹೊತ್ತು ಮಗಳನ್ನು ರಕ್ಷಿಸುವ ಬದಲು ಆಕೆಯ ಅಪ್ಪನೇ ಮಗಳಿಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

ಅತ್ಯಾಚಾರವೆಸಗಿದ ವ್ಯಕ್ತಿಗೆ ಶಿಕ್ಷೆ ಘೋಷಣೆ ಮಾಡಿದ ನ್ಯಾಯಮೂರ್ತಿ ಎಡ್ವರ್ಡ್ ಸರ್ಕಿಸಿಯನ್ ಜ್ಯೂನಿಯರ್, ಇಂಥಾ ವ್ಯಕ್ತಿಗಳು ಸಮಾಜಕ್ಕೆ ಅಪಾಯವನ್ನುಂಟು ಮಾಡುತ್ತಾರೆ ಎಂದಿದ್ದಾರೆ.

ಈ ವ್ಯಕ್ತಿಯು ಮೇ 2009 ರಿಂದ ಮೇ 2013ರ ಅವಧಿಯಲ್ಲಿ ಪ್ರತೀ ವಾರ ಎರಡರಿಂದ ಮೂರು ಬಾರಿ ಅತ್ಯಾಚಾರವೆಸಗುತ್ತಿದ್ದ. ಕೊನೆಗೆ ಧೈರ್ಯ ತಂದುಕೊಂಡ ಪುತ್ರಿ ಈತನ ಕಾಮುಕ ಕೃತ್ಯಗಳನ್ನು ಬಯಲಿಗೆಳೆದಿದ್ದಾಳೆ.

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಈತ ಅಪರಾಧಿ ಎಂದು ಸಾಬೀತಾಗಿತ್ತು.
ನನ್ನ ಅಪ್ಪ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದಾಗ ನಾನು ತುಂಬಾ ಚಿಕ್ಕವಳಿದ್ದೆ. ನನಗೆ ಎದುರಿಸುವ ಶಕ್ತಿಯಾಗಲೀ, ಧೈರ್ಯವಾಗಲೀ ಇರಲಿಲ್ಲ. ಅದರ ವಿರುದ್ಧ ಪ್ರತಿಭಟಿಸಲು ನನ್ನಿಂದ ಸಾಧ್ಯವಾಗಿರಲಿಲ್ಲ. ಈಗ ನನಗೆ 23 ವರ್ಷ. ನನ್ನಪ್ಪ ಯಾವತ್ತೂ ನನ್ನ ನೋವು, ಸಂಕಟವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ ಎಂದು ಅತ್ಯಾಚಾರಕ್ಕೊಳಗಾದ ಯುವತಿ ನ್ಯಾಯಾಲಯದಲ್ಲಿ ಹೇಳಿದ್ದಾಳೆ.

ಈತ ಪುತ್ರಿಯ ಬಾಲ್ಯವನ್ನೇ ಹಾಳು ಮಾಡಿದ್ದಾನೆ. ಆದ್ದರಿಂದ ಈತನಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ನ್ಯಾಯಾಲಯ ಹೇಳಿತ್ತು.

ಪ್ರಾಥಮಿಕ ವಿಚಾರಣೆಯ ವೇಳೆ ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರೆ ಈತನಿಗೆ 13 ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ ಈತ ತಪ್ಪು ಒಪ್ಪಿಕೊಂಡಿರಲಿಲ್ಲ. ತದನಂತರ ಇನ್ನೊಂದು ವಿಚಾರಣೆಗೆ ಮುನ್ನ ತಪ್ಪು ಒಪ್ಪಿಕೊಂಡರೆ 22 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ನ್ಯಾಯಾಲಯ ಹೇಳಿತ್ತು. ಆದರೆ ಇದಕ್ಕೂ ಆತ ಒಪ್ಪಲಿಲ್ಲ, ಆದ ಕಾರಣ ಈ ಪ್ರಕರಣದಲ್ಲಿ ಅತ್ಯಾಚಾರಿಗೆ ಗರಿಷ್ಠ ಶಿಕ್ಷೆ ನೀಡಲು ನ್ಯಾಯಾಲಯ ತೀರ್ಮಾನಿಸಿತ್ತು.

Comments are closed.