ಬೆಂಗಳೂರು, ಅ. ೨೦- ಮಗುವಿನ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ವಾಚನಾಭಿರುಚಿ ಮೂಡಲು ಸಹಾಯ ಮಾಡುವ ಸೃಜನಾತ್ಮಕತೆ ಹೆಚ್ಚಳಕ್ಕೆ ಪೂರಕವಾಗುವ ಪರಿಕಲ್ಪನೆಯೇ ಸ್ಮಾರ್ಟ್ ಫೋನ್ ಬುಕ್ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಚಿಂತಕ ಎಸ್.ಎ.ವಾಸುದೇವಮೂರ್ತಿ ಅಭಿಪ್ರಾಯಪಟ್ಟರು.
ಅವರಿಂದ ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳ ಭೌತಿಕ ಸೃಜನಾತ್ಮಕ ವಿಕಾಸ ಹಾಗೂ ಸ್ಮಾರ್ಟ್ ಫೋನ್ ಬುಕ್ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಮಾರ್ಟ್ ಫೋನ್ ಬುಕ್‌ನಲ್ಲಿರುವ ವರ್ಣಚಿತ್ರಧಾರಿತ ಕಥೆಗಳು ನರ್ಸರಿಯಿಂದ ಯುಕೆಜಿ ಹಂತದ ಮಕ್ಕಳು ಬಳಸುವ ಪಠ್ಯಪುಸ್ತಕಗಳಿಂದ ಕೂಡಿರುತ್ತದೆ. ಇದೇ ಪುಸ್ತಕಗಳ ಆಧಾರದ ಮೇಲೆ ಶಿಕ್ಷಕರು ಬೋಧನೆ ಮಾಡುತ್ತಾರೆ. ಆಟಗಳೊಂದಿಗೆ ಪಾಠವನ್ನು ಸಹ ಕಲಿಸುತ್ತಾರೆ.
ಮಕ್ಕಳು ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರವು ಮತ್ತೆ ಮನೆಯಲ್ಲಿ ಅಭ್ಯಾಸ ಮಾಡಲು ಸ್ಮಾರ್ಟ್ ಪೋನ್ ಬುಕ್ ಅವರಿಗೆ ಸಹಕಾರಿಯಾಗಿದೆ. ನಿರ್ದಿಷ್ಟ ಆಪ್ ಬಳಸಿ ಸ್ಕ್ಯಾನ್ ಮಾಡುವ ಮೂಲಕ ಅಡಿಯೋ ವಿಡಿಯೋ ಪ್ಲೇ ಮಾಡುವ ಕಲೆಯನ್ನು ಯುಕೆಜಿ ಹಂತದಲ್ಲೇ ಕಲಿಯುತ್ತಾರೆ ಎಂದರು.
ಸ್ಮಾರ್ಟ್‌ಫೋನ್‌ಗಳಿಂದ ಮಕ್ಕಳು ಪಠ್ಯದ ವಿಷಯವನ್ನು ಬಹುಬೇಗ ಗ್ರಹಿಸುತ್ತಾರೆ. ಆಂಗ್ಲ ಭಾಷೆಯ ವರ್ಣಮಾಲೆಯಲ್ಲಿನ ಎ ಯಿಂದ ಜೆಡ್‌ವರೆಗಿನ ಅಕ್ಷರಗಳನ್ನು ಬರೆಯುವುದು, ಉಚ್ಛಾರಣೆ, ಪದಜೋಡಣೆ, ವಾಕ್ಯ ರಚನೆ ಹೇಗೆ ಎನ್ನುವುದನ್ನು ಅಚ್ಚರಿ ಎನಿಸುವಷ್ಟು ತ್ವರಿತವಾಗಿ ಕಲಿಯುವುದರೊಂದಿಗೆ ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು.
ಪರಿಸರದಲ್ಲಿನ ಮರ, ಗಿಡ, ಪ್ರಾಣಿ, ಪಕ್ಷಿಗಳ ಕುರಿತು ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವಂತೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದರಿಂದ ತಿಳಿಯುತ್ತದೆ. ಇದರಿಂದ ಪರಿಸರ ಸಂರಕ್ಷಣೆ ಸಹ ಸಾಧ್ಯವಾಗುತ್ತದೆ. ಇನ್ನುಳಿದಂತೆ ಮಕ್ಕಳು ಸ್ಮಾರ್ಟ್ ಫೋನ್ ಬಳಕೆ ಮಾಡುವುದರಿಂದ ಪೋಷಕರಿಗೂ ಅನುಕೂಲವಾಗಲಿದೆ. ಮಕ್ಕಳೊಂದಿಗೆ ಪೋಷಕರು ಸಹ ಇಂಗ್ಲಿಷ್ ಭಾಷೆ ಕಲಿಯಲು ಸಹಕಾರಿಯಾಗಲಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಳವಾಗಲಿವೆ.
ನಿಜಕ್ಕೂ ಸ್ಮಾರ್ಟ್‌ಫೋನ್ ಬುಕ್ ಸಮಾಜಕ್ಕೊಂದು ಶ್ರೇಷ್ಠ ಕೊಡುಗೆ ಎಂದರು. ಇದಕ್ಕೆ ಸಂಬಂಧಿಸಿದ ಆಪ್‌ಗಳು ಉಚಿತವಾಗಿ ಲಭ್ಯವಾಗಲಿದ್ದು, ಸ್ಮಾರ್ಟ್‌ಫೋನ್ ಬುಕ್‌ಗಳ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26985100 ಅನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಬೆಂಗಳೂರು ಮೆಡಿಕಲ್ ಕಾಲೇಜ್ ಪ್ರಾಧ್ಯಾಪಕ ಡಾ.ಎಂ.ಬಿ. ರಾಮಮೂರ್ತಿ ಉದ್ಘಾಟಿಸಿದರು. ಸ್ಮಾರ್ಟ್ ಫೋನ್ ಬುಕ್ ಪರಿಣಿತ ಸಂಜೀವ್ ಬಾಪಿನ್ ಬುಕ್ ಕುರಿತ ವಿಶೇಷ ಅಂಶಗಳ ಮಾಹಿತಿ ನೀಡಿದರು.
Comments are closed.