ಅಂತರಾಷ್ಟ್ರೀಯ

ಭಾರತ–ಪಾಕ್ ಗಳಿಗೆ ಯುದ್ಧವೇ ಆಯ್ಕೆ ಅಲ್ಲ: ಪಾಕ್‌ನ ಅಮೆರಿಕ ರಾಯಭಾರಿ

Pinterest LinkedIn Tumblr

americaವಾಷಿಂಗ್ಟನ್‌: ಗಡಿ ಹಾಗೂ ಕಾಶ್ಮೀರ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನಕ್ಕೆ ಯುದ್ಧವೊಂದೇ ಆಯ್ಕೆಯಲ್ಲ; ಬದಲಿಗೆ, ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ವಿವಾದಗಳನ್ನು ಪರಿಹರಿಸಲು ಸಾಧ್ಯವಿದೆ ಎಂದು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರಿ ಜಲಿಲ್ ಅಬ್ಬಾಸ್ ಜಿಲಾನಿ ಹೇಳಿದ್ದಾರೆ.

ಇಲ್ಲಿ ನಡೆದ ವಿಶ್ವಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಯ ಪ್ರಶಸ್ತಿ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ಧದ ಆಯ್ಕೆಯೇ ಎಲ್ಲದಕ್ಕೂ ಪರಿಹಾರ ಆಗುವುದಿಲ್ಲ. ಕಾರಣ; ಎರಡೂ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಯ ಅಗತ್ಯವಿದೆ. ಜನರ ಕ್ಷೇಮಕ್ಕಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ವಿಶೇಷವಾಗಿ ಎರಡೂ ಅಣ್ವಸ್ತ್ರ ಹೊಂದಿದ ದೇಶಗಳು. ಆದ್ದರಿಂದ, ಯುದ್ಧ ಆಯ್ಕೆಯಾಗಿರುವುದಿಲ್ಲ ಎಂದು ಅವರು ಪಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಯುದ್ಧ ಕಲ್ಪನೆಗೆ ನಿಲುಕದ್ದು. ಊಹಿಸಲೂ ಅಸಾಧ್ಯ. ಆದ್ದರಿಂದ, ಪಾಕಿಸ್ತಾನ ಸರ್ಕಾರ ಅಂತರರಾಷ್ಟ್ರೀಯ ನ್ಯಾಯಪರತೆಯಂತೆ ಮಾತುಕತೆ ಮೂಲಕ ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Comments are closed.