ಅಂತರಾಷ್ಟ್ರೀಯ

ನಾವು ಇಂಡಿಯಾದೊಂದಿಗೆ ಸ್ನೇಹಕ್ಕೆ ಸಿದ್ಧ: ಇಮ್ರಾನ್ ಖಾನ್

Pinterest LinkedIn Tumblr

Imran Khanಲಾಹೋರ್: ಯಾವುದೇ ಸಮಸ್ಯೆಗಳಿಗೆ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಯುದ್ಧದಿಂದ ಪರಿಹಾರವಾಗಲ್ಲ, ಭಾರತದೊಂದಿಗಿನ ಸ್ನೇಹಕ್ಕೆ ಪಾಕಿಸ್ತಾನಿಗರು ಸಿದ್ಧ ಎಂದು ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದರೆ ಭಾರತದೊಂದಿಗೆ ಸ್ನೇಹಕ್ಕೆ ಪಾಕಿಸ್ತಾನಿಗರು ಸಿದ್ದ. ನಮಗೆ ಶಾಂತಿ ಬೇಕಿದೆ. ಯಾವುದೇ ಸಮಸ್ಯೆಗಳಿಗೆ ಯುದ್ಧದಿಂದಲ್ಲ, ಶಾಂತಿಯಿಂದ ಪರಿಹಾರ ಸಿಗುತ್ತದೆ ಎಂದು ಇಮ್ರಾನ್ ಖಾನ್ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ.

ಸಣ್ಣ ಗುಂಪೊಂದು ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎಂದು ಈ ಹಿಂದೆ ಭಾರತದಲ್ಲಿ ಮೋದಿ ಅವರನ್ನು ಭೇಟಿಯಾದಾಗ ತಿಳಿಸಿದ್ದೆ ಎಂದರು. ಆದರೆ ಉರಿ ದಾಳಿ ನಡೆದ ಮೇಲೆ ಭಾರತ ಯಾವುದೇ ತನಿಖೆ ನಡೆಸದೆ ಪ್ರಧಾನಿ ಮೋದಿ ಅವರು ಪಾಕಿಸ್ತಾನವನ್ನು ನಿಂದಿಸಿದರು ಎಂದು ತೆಹ್ರೀಕ್‌- ಇ- ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಹೇಳಿದ್ದಾರೆ.

ಮೋದಿ ಅವರು ಪಾಕಿಸ್ತಾನಕ್ಕೆ ನೀರು ನಿಲ್ಲಿಸುವುದು ಹಾಗೂ ಸೀಮಿತ ದಾಳಿ ಕುರಿತು ಮತ್ತೆ ಮಾತನಾಡಬಾರದು. ಪಾಕಿಸ್ತಾನ ಒಗ್ಗೂಡಿದ್ದು, ಯಾವುದೇ ಉದ್ರಿಕ್ತರನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಹಣಕ್ಕಾಗಿ ಬಾಯಿ ಬಿಡುತ್ತಾರೆ. ವಿಶ್ವಸಂಸ್ಥೆ ಸಭೆಯಲ್ಲೂ ಸಹ ಕಾಶ್ಮೀರ ವಿರೋಧಿ ಭಾಷಣವನ್ನು ಮಾಡಿದ್ದರು ಎಂದು ಆರೋಪಿಸಿದ್ದಾರೆ.

Comments are closed.