ಅಂತರಾಷ್ಟ್ರೀಯ

ಭಾರತೀಯ ಸೇನೆಯ ಸರ್ಜಿಕಲ್ ದಾಳಿ ಕುರಿತು ಅಮೆರಿಕಕ್ಕೆ ಮಾಹಿತಿ ಇತ್ತು

Pinterest LinkedIn Tumblr

indian-armyನ್ಯೂಯಾರ್ಕ್: ಭಾರತೀಯ ಸೇನೆ ತಡರಾತ್ರಿ ನಡೆಸಿರುವ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆ ಮಾಡಿದ್ದು, ಈ ದಾಳಿಯ ಬಗ್ಗೆ ಮೊದಲೇ ಅಮೆರಿಕಗೆ ಮಾಹಿತಿ ಇತ್ತು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಬುಧವಾರ ರಾತ್ರಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಸುಸೈನ್ ರೈಸ್ ಜೊತೆ ಮಾತನಾಡಿ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿವಂತೆ ಸೂಚಿಸಿದ್ದರು.

ಭಾರತದ ಕಾರ್ಯತಂತ್ರಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದ ಅವರು, ಈ ರೀತಿಯಾಗಿ ಪಾಕಿಸ್ತಾನಕ್ಕೆ ಒತ್ತಡವನ್ನ ಹೇರಿದರೆ ಮಾತ್ರ ತನ್ನ ದೇಶದಲ್ಲಿರುವ ಲಷ್ಕರ್ ಇ ತೈಬಾ, ಜೈಶ್ ಇ ಮುಹಮ್ಮದ್ ನಂತಹ ಉಗ್ರ ಸಂಘಟನೆಗಳ ಮೇಲೆ ಪರಿಣಾಮಕಾರಿ ಕ್ರಮಕೈಗೊಳ್ಳುತ್ತದೆ ಎಂದು ಸುಸೈನ್ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಪಿಓಕೆ ದಾಳಿಯಾಗುವ ವರೆಗೂ ಈ ಗೌಪ್ಯತೆಯನ್ನ ಅಮೆರಿಕ ಕಾಪಾಡಿತ್ತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಸದ್ಯ ಭಾರತೀಯ ಸೇನೆ ನಡೆಸಿರುವ ಕಾರ್ಯಾಚರಣೆಯಲ್ಲಿ ಒಟ್ಟು 9 ಸೈನಿಕರು, 38 ಮಂದಿ ಉಗ್ರರು ಹತ್ಯೆಯಾಗಿದ್ದು, 35ಕ್ಕೂ ಹೆಚ್ಚು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Comments are closed.