ಅಂತರಾಷ್ಟ್ರೀಯ

ಇದು ಅಜ್ಜನಲ್ಲ ….ನವಜಾತ ಗಂಡು ಶಿಶು ! ಹೀಗೆ ಕಾಣಲು ಕಾರಣವಾದದ್ದು ಏನು…?

Pinterest LinkedIn Tumblr

maguraa

ಢಾಕಾ: ಇದು ಅಜ್ಜ ಅಲ್ಲ..ನವಜಾತ ಗಂಡು ಶಿಶು. ಹೌದು…ಎಲ್ಲವೂ ಥೇಟ್‌ 80 ವರ್ಷ ಅಜ್ಜ-ಅಜ್ಜಿಯ ಚಹರೆಗಳು. ಮುಖದ ತುಂಬ ನೆರಿಗೆಗಳು, ಒಳ ಹೊಕ್ಕ ಕಣ್ಣುಗಳು ಮತ್ತು ಬಾಗಿದ ದೇಹದ ಈ ನವಜಾತ ಗಂಡು ಶಿಶು ಬಾಂಗ್ಲಾದೇಶದ ಮಗುರಾ ಜಿಲ್ಲೆಯಲ್ಲಿ ಹುಟ್ಟಿದೆ.

80ರ ಹರೆಯದ ಅಜ್ಜ ಹೇಗಿರಬಹುದೋ ಹಾಗಿದೆ ಈ ನವಜಾತ ಗಂಡು ಶಿಶು. ಪ್ರೊಗೇರಿಯಾ ಎಂಬ ವೃದ್ಧಾಪ್ಯ ರೋಗವನ್ನು ಹುಟ್ಟಿನಿಂದಲೇ ಕಟ್ಟಿಕೊಂಡಿರುವ ಈ ಮಗು ಭಾನುವಾರ ಜನ್ಮ ತಳೆದಿದೆ.

ಭುಲ್ಬಾರಿಯಾ ಗ್ರಾಮದ ಬಡ ರೈತ ಬಿಶ್ವಜಿತ್‌ ಪಾತ್ರೋ ಮತ್ತು ಪಾರುಲ್‌ ಪಾತ್ರೋ ದಂಪತಿಯ ಮಗು ಇದು. ಈ ಮಗುವನ್ನು ನೋಡಲು ಈಗ ಊರಿನ ಜನ, ಸಂಬಂಧಿಕರು ಮುಗಿಬೀಳುತ್ತಿದ್ದಾರೆ. ಆದರೆ, ಈಗಾಗಲೇ ಒಂದು ಮಗುವನ್ನು ಹೊಂದಿರುವ ಬಿಶ್ವಜಿತ್‌ ಮಾತ್ರ ನಿರ್ಲಿಪ್ತ. ಯಾವ ನೋವೂ ಅವರ ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ.

”ನಮ್ಮ ಮೊದಲ ಮಗಳು ಅಪರ್ಣಾ ತಾಯಿಯಂತೆ ಇದ್ದಾಳೆ. ನನ್ನ ಮಗ ಈಗ ನಾನು ಹೇಗಿದ್ದೇನೋ ಹಾಗಿದ್ದಾನೆ. ನಂಗೆ ಖುಷಿಯೇ,” ಎನ್ನುತ್ತಾರೆ ಬಿಶ್ವಜಿತ್‌.

ಪ್ರೊಗೇರಿಯಾ ಎನ್ನುವ ಅಪರೂಪದ ಕಾಯಿಲೆಯ ಪರಿಣಾಮ ವೃದ್ಧಾಪ್ಯ ಎಂಟುಪಟ್ಟು ವೇಗವಾಗಿ ಧಾವಿಸುತ್ತದೆ. ನಾಲ್ಕು ವರ್ಷದ ಮಗು 32 ವರ್ಷದಂತೆ, 10 ವರ್ಷದ ಮಗು 80 ವಯಸ್ಸಿನ ಅಜ್ಜನಂತೆ ಕಾಣಿಸುತ್ತದೆ. ‘ಪಾ’ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಅವರು ಪ್ರೊಗೇರಿಯಾ ರೋಗದಿಂದ ಬಳಲುವ ಹುಡುಗನ ಪಾತ್ರ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ವೈದ್ಯರ ಪ್ರಕಾರ, ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

Comments are closed.