ಅಂತರಾಷ್ಟ್ರೀಯ

ಕಾಶ್ಮೀರಿಗರ ತ್ಯಾಗ ಬಲಿದಾನಕ್ಕೆ ಪವಿತ್ರ ಈದ್ ಅನ್ನು ಸಮರ್ಪಿಸುತ್ತೇನೆ: ನವಾಜ್ ಷರೀಫ್

Pinterest LinkedIn Tumblr

nawazಲಾಹೋರ್: ಕಾಶ್ಮೀರ ಹೋರಾಟಕ್ಕಾಗಿ ಕಾಶ್ಮೀರಿಗರ ಪವಿತ್ರ ಬಲಿದಾನಗಳಿಗೆ ಈದ್ ಉಲ್ ಆಝಾವನ್ನು ಸಮರ್ಪಿಸುವುದಾಗಿ ಹೇಳುವ ಮೂಲಕ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತೆ ಭಾರತವನ್ನು ಕೆಣಕಿದ್ದಾರೆ.
ಈದ್ ಸಂದರ್ಭದಲ್ಲಿ ದೇಶದ ಮುಸ್ಲಿಂರಿಗೆ ಸಂದೇಶ ನೀಡಿರುವ ಅವರು, ಕಾಶ್ಮೀರಿಗಳ ತ್ಯಾಗ ಮತ್ತು ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ. ಇದೇ ವೇಳೆ ಸೇನಾಪಡೆಗಳ ಮೂಲಕ ಕಾಶ್ಮೀರಿಗರ ಧ್ವನಿಯನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ಭಾರತದ ವಿರುದ್ಧ ಗುಡುಗಿದ್ದಾರೆ.
ಭಾರತದಿಂದ ಸ್ವಾತಂತ್ರ್ಯಗಳಿಸಲು ಕಾಶ್ಮೀರದ ಜನತೆ ಮೂರನೇ ತಲೆಮಾರಿಗೂ ಹೋರಾಟವನ್ನು ತ್ಯಾಗ ಮಾಡಿದ್ದಾರೆ ಎಂದು ಷರೀಫ್ ಹೇಳಿದ್ದಾರೆ.

Comments are closed.