ಅಂತರಾಷ್ಟ್ರೀಯ

‘ಗ್ಯಾಲಕ್ಸಿ ನೋಟ್‌ 7 ಬಳಸಬೇಡಿ’

Pinterest LinkedIn Tumblr

note-7

ಸೋಲ್‌: ಸುರಕ್ಷತೆಯ ದೃಷ್ಟಿಯಿಂದ ಗ್ಯಾಲಕ್ಸಿ ನೋಟ್‌ 7 ಸ್ಮಾರ್ಟ್‌ಫೋನ್‌ ಬಳಕೆಯನ್ನು ತಕ್ಷಣದಿಂದ ನಿಲ್ಲಿಸುವಂತೆ ದಕ್ಷಿಣ ಕೊರಿಯಾ ಮೂಲದ ಸಾಮ್ಸಂಗ್‌ ಕಂಪೆನಿ ತನ್ನ ಜಾಗತಿಕ ಗ್ರಾಹಕರಿಗೆ ಸೂಚಿಸಿದೆ.

ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ನೋಟ್‌ 7 ಮೊಬೈಲ್‌ನ ದೋಷಪೂರಿತ ಲಿಥಿಯಂ ಬ್ಯಾಟರಿಯಿಂದ ಬೆಂಕಿ ಹೊತ್ತಿಕೊಂಡ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾದ ಕಾರಣ ಕಂಪೆನಿ ತುರ್ತು ಪ್ರಕಟಣೆ ಹೊರಡಿಸಿದೆ.

ಇದಕ್ಕೂ ಮೊದಲು ಸಾಮ್ಸಂಗ್‌ ದೋಷಪೂರಿತ ಬ್ಯಾಟರಿ ಹೊಂದಿರುವ ನೋಟ್ 7 ಮೊಬೈಲ್‌ಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವುದಾಗಿ ಹೇಳಿತ್ತು. ಅದಾದ ನಂತರವೂ ಕೆಲವು ಗ್ರಾಹಕರು ನೋಟ್‌ 7 ಬಳಕೆ ಮುಂದುವರಿಸಿದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕಂಪೆನಿ ಅಧಿಕೃತವಾಗಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ.

ದಕ್ಷಿಣ ಕೊರಿಯಾ ಗ್ರಾಹಕರಿಗೆ ಸೆ.19ರಿಂದ ಹೊಸ ಬ್ಯಾಟರಿಯುಳ್ಳ ನೋಟ್‌ 7 ನೀಡಲು ಉದ್ದೇಶಿಸಿದೆ. ಉಳಿದ ರಾಷ್ಟ್ರಗಳಲ್ಲೂ ಹೊಸ ಫೋನ್‌ ನೀಡಲು ನಿಗದಿತ ದಿನಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

Comments are closed.