ಬೀಜಿಂಗ್: ತಂತ್ರಜ್ಞಾನದ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಕಂಡು ಹಿಡಿಯುವುದಕ್ಕೆ ಪ್ರಸಿದ್ಧವಾಗಿರುವ ಚೀನಾ, ಈಗ ಸಾರಿಗೆ ಕ್ಷೇತ್ರದಲ್ಲಿ ವಿಶ್ವದಲ್ಲೇ ವಿನೂತನವಾದುದ್ದನ್ನು ಕಂಡುಹಿಡಿದೆ.
ಚೀನಾ ಕಂಡು ಹಿಡಿದಿರುವ ಬೃಹತ್ ಗಾತ್ರದ ಸ್ಟ್ರಾಡೆಲ್ ಬಸ್ ರೈಲಿನ ಮಾದರಿಯಲ್ಲಿ ಟ್ರ್ಯಾಕ್ ಮೇಲೆ ಸಂಚರಿಸಲಿದ್ದು 1,400 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸುಮಾರು 60 ಕಿಮಿ ವೇಗದಲ್ಲಿ ಸಂಚರಿಸುವ ಈ ವಾಹನದ ಕೆಳಗೆ ಕಾರ್, ದ್ವಿಚಕ್ರ ವಾಹನಗಳೂ ಸಂಚರಿಸಬಹುದಾಗಿರುವುದು ಸ್ಟ್ರಾಡೆಲ್ ಬಸ್ ನ ಮತ್ತೊಂದು ವಿಶೇಷತೆಯಾಗಿದೆ.
ಸ್ಟ್ರಾಡೆಲ್ ಬಸ್ ನ್ನು ಚೀನಾ ಈಗಾಗಲೇ ಉತ್ತರ ಚೀನಾದಲ್ಲಿ ಪರೀಕ್ಷಾರ್ಥವಾಗಿ ಚಾಲನೆ ಮಾಡಿದ್ದು, ವಿದ್ಯುತ್ ಚಾಲಿತ ಬಸ್ ಆಗಿರುವ ಸ್ಟ್ರಾಡೆಲ್ ಬಸ್ 22 ಮೀಟರ್ ಉದ್ದವಿದ್ದು 7.8 ಮೀಟರ್ ಅಗಲವಿದ್ದು ಇದನ್ನು ಲ್ಯಾಂಡ್ ಏರ್ ಬಸ್ ಅಂತಲೂ ಕರೆಯಲಾಗುತ್ತದೆ.
ಸ್ಟ್ರಾಡೆಲ್ ಬಸ್ ಬೀಜಿಂಗ್ ನ ಎಕ್ಸ್ ಪ್ಲೋರ್ ಬಸ್ ಎಂಬ ಸಂಸ್ಥೆಯ ಕಲ್ಪನೆಯಾಗಿದ್ದು 2 ಮೀಟರ್ ಗಳಷ್ಟು ಎತ್ತರವಿರುವ ಕಾರುಗಳು ಸುಲಭವಾಗಿ ಸ್ಟ್ರಾಡೆಲ್ ಬಸ್ ನ ಕೆಳಗೆ ಸಂಚರಿಸಬಹುದಾಗಿದ್ದು ರಸ್ತೆಯ ಜಾಗವನ್ನು ಉಳಿಸಬಹುದಾಗಿದೆ ಎಂದು ಬಸ್ ನ ವಿನ್ಯಾಸಗೊಳಿಸಿರುವ ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ.
Comments are closed.