ಅಂತರಾಷ್ಟ್ರೀಯ

ಚೀನಾ ಭೂಕುಸಿತ: 28 ಮಂದಿ ಸಾವು

Pinterest LinkedIn Tumblr

BHUkusithaಬೀಜಿಂಗ್(ಪಿಟಿಐ): ಚೀನಾದಲ್ಲಿ ಸಂಭವಿಸಿರುವ ಭಾರೀ ಮಳೆ ಹಾಗೂ ಭೂಕುಸಿತದಿಂದ ಕನಿಷ್ಠ 28 ಮಂದಿ ಮೃತಪಟ್ಟು, ಮೂವರು ನಾಪತ್ತೆಯಾಗಿದ್ದಾರೆ.

ಭೂಕುಸಿತದಿಂದ ದಕ್ಷಿಣ ಚೀನಾದ ಗೌಜೌ ಪ್ರಾಂತ್ಯದಲ್ಲಿ ನಿನ್ನೆ ಇಪ್ಪತ್ತು ಮಂದಿ ಮೃತಪಟ್ಟ ಘಟನೆ ಸಂಬವಿಸಿದ್ದರೆ, ಪಿಯಾಂಪೋ ಪ್ರಾಂತ್ಯದಲ್ಲಿ ಮೂವರು ನೀರು ಪಾಲಾಗಿದ್ದಾರೆ.

ಮೂವತ್ತು ಮಂದಿ ಅವಶೇಷಗಳಡಿ ಸಿಕ್ಕಿಕೊಂಡಿದ್ದಾರೆ. ಅವರಲ್ಲಿ ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಕ್ಷಣಾ ಕಾರ್ಯದಲ್ಲಿ ಸುಮಾರು 800 ಮಂದಿ ಯೋಧರು ತೊಡಗಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.

Comments are closed.