ಕುವೈತ್ ಸಿಟಿ: ಕುವೈತ್ ಸಿಟಿ ಫರ್ವಾನಿಯಾದಲ್ಲಿ ವಲಸಿಗ ಕಾರ್ಮಿಕರು ವಾಸಿಸುತ್ತಿದ್ದ ಹಳೆಯ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿ 9 ಭಾರತೀಯ ಮತ್ತು ಪಾಕಿಸ್ತಾನಿ ಕಾರ್ಮಿಕರು ಮೃತರಾಗಿದ್ದು, 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತರಾಗಿರುವ ಕಾರ್ಮಿಕರು ಭಾರತ ಮತ್ತು ಪಾಕ್ನಿಂದ ವಲಸೆ ಬಂದ ಕಾರ್ಮಿಕರು. 6 ಜನರು ಸ್ಥಳದಲ್ಲೇ ಮೃತರಾದರೆ, 3 ಕಾರ್ಮಿಕರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಮೃತರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವಾಲಯದ ಡಾ. ಜಮಾಲ್ ಅಲ್ ಹರಬಿ ತಿಳಿಸಿದ್ದಾರೆ.
Comments are closed.