ಅಂತರಾಷ್ಟ್ರೀಯ

ಅಫ್ಘನ್‌ನಲ್ಲಿ ತಾಲಿಬಾನ್‌ ಆತ್ಮಹತ್ಯೆ ಬಾಂಬ್‌ ದಾಳಿ: 27 ಸಾವು

Pinterest LinkedIn Tumblr

afaganಕಾಬೂಲ್‌(ಎಎಫ್‌ಪಿ): ತಾಲಿಬಾನಿ ಆತ್ಮಹತ್ಯೆ ಬಾಂಬರ್‌ಗಳು ನಡೆಸಿದ ದಾಳಿಗೆ 27 ಪೊಲೀಸರು ಸಾವಿಗೀಡಾಗಿ 40 ಮಂದಿ ಗಾಯಗೊಂಡ ಘಟನೆ ಅಫ್ಘಾನಿಸ್ತಾನದ ಕಾಬೂಲ್‌ನ ಹೊರ ವಲಯದಲ್ಲಿ ಗುರುವಾರ ಸಂಭವಿಸಿದೆ.

ಈಚೆಗಷ್ಟೆ ಪೊಲೀಸ್‌ ತರಬೇತಿ ಪಡೆದ ಕೆಡೆಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಮೂರು ಬಸ್‌ಗಳ ಮೇಲೆ ಈ ದಾಳಿ ನಡೆದಿದೆ. ಕಾಬೂಲ್‌ನ ಹೊರ ವಲಯದಲ್ಲಿ ಬಸ್‌ ಸಾಗುತ್ತಿದ್ದಾಗ ಎರಡು ತಾಲಿಬಾನಿ ಆತ್ಮಹತ್ಯೆ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಅರೆಸೇನಾ ಪಡೆ ನೀಡಿರುವ ಮಾಹಿತಿ ಆಧರಿಸಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 27 ಪೊಲಿಸರು ಸಾವಿಗೀಡಾಗಿದ್ದು, 40 ಜನ ಗಾಯಗೊಂಡಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

Comments are closed.