ಸ್ಟಾಕ್‌ಹೋಮ್(ಸ್ವೀಡನ್): ರಸ್ತೆಗಿಳಿದರೆ ಸಾಕು, ಹೊಗೆ, ಮಾಲಿನ್ಯ! ಆದರೆ ಸ್ವೀಡನ್‌ನಲ್ಲಿ ಇದಕ್ಕೆಲ್ಲ ಬ್ರೇಕ್! ದೊಡ್ಡ ವಾಹನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಹೊರಸೂಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ವೀಡನ್‌ನ ಗಾವೆÉ ನಗರದಲ್ಲಿ ಜಗತ್ತಿನಲ್ಲೇ ಮೊದಲ ಬಾರಿ ಟ್ರಕ್‌ನಂಥ ಭಾರೀ ಸರಕು ಸಾಗಣೆ ವಾಹನಗಳಿಗಾಗಿ ವಿದ್ಯುತ್ ರಸ್ತೆಗೆ ಚಾಲನೆ ನೀಡಲಾಗಿದೆ. ಈ ವಿದ್ಯುತ್ ರಸ್ತೆಯಲ್ಲಿ ಇದೀಗ ವಿದ್ಯುತ್ ಚಾಲಿತ ಲಾರಿಗಳ ಪ್ರಯೋಗಾರ್ಥ ಸಂಚಾರ ನಡೆಯುತ್ತಿದೆ. ಇಲ್ಲಿನ ಇ16 ರಸ್ತೆಯ 2 ಕಿ.ಮೀ. ವಿಸ್ತಾರದಲ್ಲಿ ಪ್ರಸಿದ್ಧ ಲಾರಿ ತಯಾರಿಕಾ ಕಂಪೆನಿ ಸ್ಕಾನಿಯಾ ಮಾರ್ಪಡುಗೊಳಿಸಿದ ವಿದ್ಯುತ್ ಲಾರಿಗಳ ಪರೀಕ್ಷೆ ನಡೆಸುತ್ತಿದೆ. ವಿಶ್ವದ ಹಲವೆಡೆ ವಿದ್ಯುತ್ ಚಾಲಿತ ರಸ್ತೆಗಳಿದ್ದರೂ ಅವು ಕೇವಲ ಪ್ರಯಾಣಿಕ ವಾಹನಗಳಿಗೆ ಮಾತ್ರ ಮೀಸಲಾಗಿವೆ.
ವಿದ್ಯುತ್ ರಸ್ತೆ ಹೇಗಿರುತ್ತೆ?: ರಸ್ತೆಗಳ ಒಂದು ಲೇನ್‌ಗೆ ಸೀಮಿತವಾಗಿ ರಿಸಿ, ವಿದ್ಯುತ್ ಸಂಪರ್ಕವಿರುತ್ತದೆ. ಇಲ್ಲಿ ರೈಲು ಮಾದರಿ, ಲಾರಿಗಳ ಮೇಲ್ಭಾಗಕ್ಕೆ ವಿದ್ಯುತ್ ಸಂಪರ್ಕವಿದ್ದು, ಅದೇ ಲೇನ್‌ನಲ್ಲಿ ಸಂಚರಿಸುತ್ತವೆ. ಉಳಿದ ಲೇನ್‌ಗಳಲ್ಲಿ ಇತರ ವಾಹನಗಳು ಸಂಚರಿಸುತ್ತವೆ. ಸದ್ಯ ಸ್ಕಾನಿಯಾ ಜೈವಿಕ ಇಂಧನದಿಂದ ಓಡುವ ಹೈಬ್ರಿಡ್ ಲಾರಿಗಳನ್ನು, ವಿದ್ಯುತ್ ಚಾಲಿತವಾಗಿ ಓಡುವಂತೆಯೂ ಮಾಡಿದೆ. ಈ ರಸ್ತೆಯ ಎಂಜಿನಿಯರಿಂಗ್ ಕೆಲಸವನ್ನು ಜರ್ಮನಿಯ ಸೀಮನ್ಸ್ ಕಂಪೆನಿ ಮಾಡಿದೆ. ವಿದ್ಯುತ್ ತಂತಿಯ ಸಂಪರ್ಕ ಕಡಿದರೂ, ಲಾರಿಗಳು ಜೈವಿಕ ಇಂಧನ ಹೊಂದಿರುವುದರಿಂದ ಚಾಲನೆಗೆ ಅಡ್ಡಿಯಾಗದು.
-ಉದಯವಾಣಿ
Comments are closed.