ಅಂತರಾಷ್ಟ್ರೀಯ

ಕಾರು ಮೈಮೇಲೆ ಹರಿದರೂ ಬದುಕುಳಿದ ಮಹಿಳೆ

Pinterest LinkedIn Tumblr

4ಜಿಯಾಂಗ್‌ ಸೂ : ಮೈಮೇಲೆ ಕಾರು ಹರಿದರೂ ಮಹಿಳೆಯೊಬ್ಬಳು ಪವಾಡ ಸದೃಶವಾಗಿ ಬದುಕುಳಿದ ಘಟನೆ ಚೀನಾದಲ್ಲಿ ನಡೆದಿದ್ದು,ಅಪಘಾತದ ಸಿಸಿಟಿವಿ ವಿಡಿಯೋ ಇದೀಗ ವೈರಲ್‌ ಆಗಿ ಹರಿದಾಡುತ್ತಿದ್ದು, ನೀವು ವಿಡಿಯೋ ನೋಡಿ.

ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಿವರ್ಸ್‌ ತೆಗೆದುಕೊಳ್ಳುತ್ತಿದ್ದ ಗೂಡ್ಸ್‌ ರಿಕ್ಷಾವೊಂದು ಢಿಕ್ಕಿಯಾಗಿ ಮಹಿಳೆ ರಸ್ತೆಗೆ ಎಸೆಯಲ್‌ಪಟ್ಟಿದ್ದಾರೆ. ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕಾರು ಅವರ ಮೈಮೇಲೆ ಹರಿದಿದೆ. ಪರಿಣಾಮವಾಗಿ ಕ್ಸೆ„ ಎನ್ನುವ ಮಹಿಳೆಯ ಇಡೀ ದೇಹ ಕಾರಿನ ಅಡಿಗೆ ಸಿಲುಕಿತ್ತು. ಸ್ವಲ್ಪ ದೂರ ಚಲಿಸಿ ಕಾರು ಚಾಲಕ ಬ್ರೇಕ್‌ ಹಾಕಿ ನಿಲ್ಲಿಸಿದ್ದಾನೆ.

ಕೂಡಲೇ ಸ್ಥಳದಲ್ಲಿದ್ದ ಹತ್ತಾರು ಮಂದಿ ಕಾರನ್ನುಎತ್ತಿ ಮಹಿಳೆಯನ್ನುರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ವಾರದ ಕಾಲ ನಡೆದ ಚಿಕಿತ್ಸೆಯ ಬಳಿಕ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳು ಮಾತ್ರ ಆಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
-ಉದಯವಾಣಿ

Comments are closed.