ಅಂತರಾಷ್ಟ್ರೀಯ

ತನ್ನ ರುದ್ರ ರಮಣೀಯ ದೃಶ್ಯಗಳಿಂದ ಮತ್ತೆ ಸುದ್ದಿಯಲ್ಲಿದೆ ಹಾಂಗ್ ಸನ್ ಡೂಂಗ್ ಗುಹೆ !

Pinterest LinkedIn Tumblr

Son Doong4

ವಿಯೆಟ್ನಾಂನ ಪಾಂಗ್ ನ್ಹಾ ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನದಲ್ಲಿರುವ ವಿಶ್ವದ ಅತಿ ದೊಡ್ಡ ಗುಹೆ ಹಾಂಗ್ ಸನ್ ಡೂಂಗ್ ತನ್ನ ರುದ್ರ ರಮಣೀಯ ದೃಶ್ಯಗಳಿಂದ ಮತ್ತೆ ಸುದ್ದಿಯಲ್ಲಿದೆ. 5 ಕಿ.ಮೀ. ಉದ್ದವಿರುವ ಹಾಂಗ್ ಸನ್ ಡೂಂಗ್ ಗುಹೆ, 200 ಮೀಟರ್ ಎತ್ತರ ಮತ್ತು 150 ಮೀಟರ್ ಅಗಲವಿದೆ. ಇದರೊಳಗೆ 40 ಮಹಡಿಯ ಕಟ್ಟಡವನ್ನು ನಿರ್ವಿುಸುವಷ್ಟು ಸ್ಥಳಾವಕಾಶವಿದ್ದು, ಸ್ವಿಸ್ ಫೋಟೋಗ್ರಾಫರ್ ಉರ್ಸ್ ಝಿಲ್ವುನ್ ಇದರ ಸೌಂದರ್ಯವನ್ನು ಜಗತ್ತಿಗೆ ತೆರೆದಿಟ್ಟಿದ್ದಾರೆ.

Son Doong3

Son Doong2

Son Doong1

Son Doong

ಹೊಸ ಜಗತ್ತಿಗೆ ತೆರೆದುಕೊಂಡಂತಿತ್ತು: ದೊಡ್ಡ ಗುಹೆಯೊಳಗೆ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡಿರುವ ಉರ್ಸ್, ಗುಹೆಯೊಳಕ್ಕೆ ಹೊಸ ಜಗತ್ತನ್ನು ಕಾಣುವಂತೆ ಭಾಸವಾಗುತ್ತಿತ್ತು ಎಂದು ಬಣ್ಣಿಸಿದ್ದಾರೆ. ಇದರೊಳಕ್ಕೆ ಹೋಗುವುದು ಸುಲಭವಲ್ಲ ಅರ್ಧದಿನ ದಟ್ಟಾರಣ್ಯದಲ್ಲಿ ಸಾಗಬೇಕು. ನಂತರ ಗುಹೆಯ ದ್ವಾರದ ಬಳಿ ತಲುಪುತ್ತೇವೆ. ಅಲ್ಲಿಂದ 80 ಮೀಟರ್ ಆಳಕ್ಕೆ ಹಗ್ಗದ ಸಹಾಯದಿಂದ ಇಳಿಯಬೇಕು. ನಂತರ ಕತ್ತಲು ತುಂಬಿರುವ ಪ್ರದೇಶ ಕಾಣಿಸುತ್ತದೆ. ಇದು ಜಾರುತ್ತದೆ ಆದ್ದರಿಂದ ತೀರಾ ಎಚ್ಚರಿಕೆ ಅಗತ್ಯ. ಇಲ್ಲಿ ರಾತ್ರಿ ಟೆಂಟ್ ನಿರ್ವಿುಸಿಕೊಂಡು ಉಳಿಯುವುದಕ್ಕೆ ಅವಕಾಶವಿದೆ ಎನ್ನುತ್ತಾರೆ.

450 ಪ್ರವಾಸಿಗರಿಗೆ ಮಾತ್ರ ಅವಕಾಶ: ಈ ಗುಹೆಗೆ ಬೇಕೆಂದಾಗ ಹೋಗಲು ಸಾಧ್ಯವಿಲ್ಲ. ನಿಗದಿಯಂತೆ ಪ್ರತಿವರ್ಷ 450 ಪ್ರವಾಸಿಗರು ಮಾತ್ರ ಗುಹೆಯೊಳಕ್ಕೆ ತೆರಳಬಹುದಾಗಿದೆ. ಅಲ್ಲದೆ ಆಕ್ಸಲಿಸ್ ಅಡ್ವೆಂಚರ್ ಹೆಸರಿನ ಆಪರೇಟರ್ ಮಾತ್ರ ಇಲ್ಲಿಗೆ ಪ್ರವಾಸ ಆಯೋಜನೆ ಮಾಡುತ್ತಾರೆ. ಪ್ರವಾಸಕ್ಕಾಗಿ ವಿಯೆಟ್ನಾಂ ಸರ್ಕಾರದೊಂದಿಗೆ ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

Comments are closed.