ಅಂತರಾಷ್ಟ್ರೀಯ

ಅಖಂಡ ಭಾರತ ಭೂಪಟ : ಮೊರಾಕ್ಕೊ ವಿವಿ ಅವಾಂತರ

Pinterest LinkedIn Tumblr

morakkoರಬತ್, ಜೂ.2- ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ವೇಳೆ ಪಾಕಿಸ್ಥಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ಥಾನಗಳನ್ನೊಳಗೊಂಡ ಅಖಂಡ ಭಾರತ ಭೂಪಟವನ್ನು ಪ್ರದರ್ಶಿಸುವ ಮೂಲಕ ಮೊರಾಕ್ಕೋದ ವಿಶ್ವವಿದ್ಯಾನಿಲಯವೊಂದು ಭಾರೀ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನಿನ್ನೆ ಇಲ್ಲಿನ ಮೊಹ್ಮದ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವ ಕಾರ್ಯಕ್ರಮವಿತ್ತು. ಹಾಗಾಗಿ ಭಾರತದ ನಿಯೋಗದ ಸದಸ್ಯರು ಪೂರ್ವಭಾವಿಯಾಗಿ ವಿವಿಗೆ ಭೇಟಿ ನೀಡಿದ್ದರು.

ಆ ವೇಳೆ ಅಖಂಡ ಭಾರತದ ನಕ್ಷೆಯನ್ನು ಅಲ್ಲಿ ಪ್ರದರ್ಶಿಸಲಾಗಿತ್ತು. ನಿಯೋಗದ ಸದಸ್ಯರು ಇದನ್ನು ಕಂಡು ಉಪರಾಷ್ಟ್ರಪತಿ ಬರುವ ವೇಳೆಗೆ ಅದನ್ನು ಸರಿಪಡಿಸಿ ಸಂಭಾವ್ಯ ಅಚಾತುರ್ಯವನ್ನು ತಪ್ಪಿಸಿದರು.

Comments are closed.