ಅಂತರಾಷ್ಟ್ರೀಯ

ಆಫ್ರಿಕಾಗೆ ನರಮಾಂಸಾಹಾರ ಮಾರಾಟ ! ಆರೋಪ ತಳ್ಳಿಹಾಕಿದ ಚೈನಾ

Pinterest LinkedIn Tumblr

Human-MEAT-

ಲಸ್ಕಾ: ಆಫ್ರಿಕಾಗೆ ಮನುಷ್ಯರ ಮಾಂಸವನ್ನು ಆಹಾರವನ್ನಾಗಿ ಚೈನಾ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಜಾಂಬಿಯ ದೇಶದ ಮಾಧ್ಯಮ ಮಾಡಿದ್ದ ವರದಿಯನ್ನು ಚೈನಾ ಹಿರಿಯ ಅಧಿಕಾರಿ ತಳ್ಳಿಹಾಕಿದ್ದಾರೆ.

ಚೈನಾದ ಸಂರಕ್ಷಕ ಬೀಫ್ ಕೊಳ್ಳದಂತೆ ಚೈನಾದಲ್ಲಿ ವಾಸಿಸುವ ಹೆಸರು ಹೇಳಲು ಇಚ್ಚಿಸದ ಜಾಂಬಿಯಾ ಮಹಿಳೆ ತಿಳಿಸಿರುವುದಾಗಿ ಈ ಮಾಧ್ಯಮ ವರದಿ ಮಾಡಿತ್ತು.

ಚೈನಾದ ಬೀಫ್ ಉತ್ಪನ್ನ ಸಂಸ್ಥೆಗಳು ಸತ್ತ ಮನುಷ್ಯರ ದೇಹಗಳನ್ನು ಕಲೆ ಹಾಕಿ, ಶವದ ಮಾಂಸ ಕತ್ತರಿಸಿ ಉಪ್ಪು ಸವರಿ-ಒಣಗಿಸಿ, ಟಿನ್ ಡಬ್ಬಗಳಲ್ಲಿ ಬೀಫ್ ಎಂದು ಪಟ್ಟಿ ಅಂಟಿಸಿ ಆಫ್ರಿಕಾ ದೇಶಗಳಿಗೆ ರಫ್ತು ಮಾಡುತ್ತಿವೆ ಎಂದು ಈ ಮಹಿಳೆ ದೂರಿದ್ದರು.

ಜಾಂಬಿಯಾ ಮತ್ತು ಚೈನಾದ ನಡುವಿನ ದೀರ್ಘ ಕಾಲದ ಸಂಬಂಧವನ್ನು ಹಾಳು ಮಾಡುವ ದೃಷ್ಟಿಯಿಂದ ಮಾಡಿರುವ ಆರೋಪ ಇದು ಎಂದು ಜಾಂಬಿಯಾ ದೇಶಕ್ಕ ಚೈನಾದ ರಾಯಭಾರಿ ಯಾಂಗ್ ಯೌಮಿಂಗ್ ಹೇಳಿದ್ದಾರೆ.

“ಇದು ದುರುದ್ದೇಶಪೂರಿತವಾಗಿ ಕಪ್ಪು ಮಸಿ ಬಳಿಯಲು ನಡೆಸಿರುವ ಪಿತೂರಿ ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.

“ಇಂತಹ ಆರೋಪದ ಮೇಲೆ ನಮ್ಮ ಕೋಪವನ್ನು ಮತ್ತು ತೀವ್ರ ಖಂಡನೆಯನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೇವೆ” ಎಂದು ಕೂಡ ಅವರು ಹೇಳಿದ್ದಾರೆ.

ಇದನ್ನು ವರದಿ ಮಾಡಿ, ವದಂತಿಗಳನ್ನು ಹಬ್ಬಿಸಿದ ಟ್ಯಾಬ್ಲಾಯ್ಡ್ ಪತ್ರಿಕೆಯ ವಿರುದ್ಧ ತನಿಖೆ ನಡೆಸಬೇಕೆಂದು, ರಾಯಭಾರಿ ಜಾಂಬಿಯಾ ದೇಶದ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Comments are closed.