ಅಂತರಾಷ್ಟ್ರೀಯ

3 ಬಾರಿ ಕಚ್ಚಿಸಿಕೊಂಡ್ರೂ ಬಾಲಕಿಯನ್ನ ವಿಷಕಾರಿ ಹಾವಿನಿಂದ ಕಾಪಾಡಿದ ನಾಯಿ

Pinterest LinkedIn Tumblr

haus_dog

ವಾಷಿಂಗ್ಟನ್: ತನ್ನ ಪ್ರಾಣವನ್ನು ಒತ್ತೆಯಿಟ್ಟ ನಾಯಿಯೊಂದು ಏಳರ ಹರೆಯದ ಬಾಲಕಿಯನ್ನು ಕೊಳಕು ಮಂಡಲ ಹಾವಿನಿಂದ ರಕ್ಷಿಸಿದ ಘಟನೆ ಫ್ಲೋರಿಡಾದಿಂದ ವರದಿಯಾಗಿದೆ.

ಹವೂಸ್‌ಎಂಬ ಹೆಸರಿನ ಸಾಕು ನಾಯಿ ತಮ್ಮ ಯಜಮಾನನ ಮಗಳನ್ನು ರಕ್ಷಿಸಿ ಅಮೆರಿಕದಲ್ಲೀಗ ಹೀರೋ ಆಗಿದೆ. ಬುಧವಾರ ಹವೂಸ್ ಜತೆ ಬಾಲಕಿ ಮೋಳಿ ಡೆಲೂಕಾ ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ವೇಳೆ ಕೊಳಕು ಮಂಡಲ ಹಾವೊಂದು ದಾಳಿ ಮಾಡಲೆತ್ನಿಸಿತ್ತು. ಇದನ್ನು ನೋಡಿದ ತಕ್ಷಣ ಜಾಗ್ರತನಾದ ಹವೂಸ್ ಹಾವನ್ನು ಎಳೆದಾಡಿ ಬಾಲಕಿಯ ಪ್ರಾಣವನ್ನು ರಕ್ಷಿಸಿದೆ. ಬಾಲಕಿಯನ್ನು ರಕ್ಷಿಸಿ ಹಾವನ್ನು ಕೊಂದ ಕೂಡಲೇ ಹವೂಸ್‌ನ ಬಾಯಿಯಿಂದ ರಕ್ತ ಬರಲಾರಂಭಿಸಿತು.

ಈ ಹೋರಾಟದಲ್ಲಿ ಮೂರು ಬಾರಿ ಹವೂಸ್‌ಗೆ ಹಾವು ಕಚ್ಚಿದೆ. ಪರಿಣಾಮ ಹವೂಸ್‌ನ ಎರಡೂ ಕಿಡ್ನಿಗಳಿಗೆ ಹಾನಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹವೂಸ್‌ನ ಚಿಕಿತ್ಸೆಗಾಗಿ 10,000 ಡಾಲರ್‌ಗಿಂತಲೂ ಹೆಚ್ಚಿನ ಹಣ ಅಗತ್ಯವಿದೆ ಎಂದಿದ್ದಾರೆ ವೈದ್ಯರು.

ಹವೂಸ್‌ನ ಪ್ರಾಮಾಣಿಕತೆ ಮತ್ತು ಸಾಹಸದ ಸುದ್ದಿ ಕೇಳುತ್ತಿದ್ದಂತೆ ಜನರು ಮೂಕಪ್ರಾಣಿಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸತೊಡಗಿದ್ದಾರೆ. ಇದೀಗ ಗೋ ಫಂಡ್ ಮಿ ಡಾಟ್ ಕಾಂ ಫಂಡ್ ರೈಸಿಂಗ್ ಪೇಜಿನ ಮೂಲಕ ಹವೂಸ್‌ನ ಚಿಕಿತ್ಸೆಗಾಗಿ 45,000 ಡಾಲರ್‌ಗಿಂತಲೂ ಹೆಚ್ಚಿನ ಹಣ ಸಂಗ್ರಹವಾಗಿದೆ. ಎಂದು ಎರಡು ತಿಂಗಳುಗಳ ಹಿಂದೆಯಷ್ಟೇ ಮೋಳಿ ಡಿಲೂಕಾಳ ಕುಟುಂಬ ನಿರಾಶ್ರಿತರ ಕೇಂದ್ರದಿಂದ ಹವೂಸ್‌ನ್ನು ಕರೆತಂದು ಸಾಕಿದ್ದರು.

Write A Comment