ಅಂತರಾಷ್ಟ್ರೀಯ

ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವರಲ್ಲಿ 10ರಿಂದ 24 ವಯಸ್ಸಿನ ಎಳೆಯರ ಸಂಖ್ಯೆಯೇ ಅಧಿಕ..!

Pinterest LinkedIn Tumblr

suಲಂಡನ್, ಮೇ 10-ಕಳೆದ 2013ರಲ್ಲಿ 10ರಿಂದ 24 ವಯಸ್ಸಿನ ಸುಮಾರು 63 ಸಾವಿರ ಮಂದಿ ಆತ್ಮಹತ್ಯೆಗೆ ಶರಣಾಗುವುದರೊಂದಿಗೆ, ಭಾರತದ ಒಟ್ಟು ಸಾವಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯರ ಸಂಖ್ಯೆಯೇ ಅಧಿಕವಾಗಿದೆ.

2011ರ ಗಣತಿಯ ಪ್ರಕಾರ 364.66 ಮಿಲಿಯನ್ ಎಳೆಯರು (10-24 ವಯೋಮಾನ) ಆತ್ಮಹತ್ಯೆಗೆ ಬಲಿಯಾಗಿದ್ದು, ದೇಶದ ಒಟ್ಟು ಜನ ಸಂಖ್ಯೆಯ ಶೇ.30.11ರಷ್ಟು ಹೆಚ್ಚಿದ್ದು, ಇದು ತೀವ್ರ ಆತಂಕಕ್ಕೆ ಎಡೆಮಾಡಿದೆ ಎಂದು ಆರೋಗ್ಯಕ್ಕೆ ಸಂಬಂಧಿಸಿದ ಲ್ಯಾನ್ಸೆಟ್ ಕಮಿಷನ್ ಇಂದು ಲಂಡನ್‌ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.

2013ರಲ್ಲಿ ರಸ್ತೆ ಅಪಘಾತಕ್ಕೆ 41,168 ಸಾವುಗಳು ಹಾಗೂ ಟುಬರ್‌ಕ್ಯುಲಾಸಿಸ್‌ನಿಂದ ಲಾಸಿಸ್‌ನಿಂದ 32,171 ಸಾವುಗಳು ಸಂಭವಿಸಿದ್ದು, ಇವು ಎರಡು ಮತ್ತು ಮೂರನೆ ಅತಿದೊಡ್ಡ ಸಾವಿನ ಕಾರಣಗಳಾಗಿವೆ. ಒಟ್ಟಾರೆ ಭಾರತದಲ್ಲಿ 2013ನೆ ವರ್ಷ-73,359 ಮಂದಿ ಎಳೆಯರು ಮರಣವನ್ನಪ್ಪಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿಯೂ ಇದೇ ಕಾರಣಗಳಿಂದಲೇ ಹೆಚ್ಚು ಯುವಜನಾಂಗ ಸಾಯುತ್ತಿದ್ದರೂ ಭಾರತದಲ್ಲೇ ಅಧಿಕವಾಗಿದೆ ಎಂದು ವರದಿ ಹೇಳಿದೆ.

Write A Comment