ಅಂತರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ ಗಣಿತದ ಲೆಕ್ಕವನ್ನು ಬರೆಯುತ್ತಿದ್ದವನನ್ನು ನೋಡಿ ಉಗ್ರನೆಂದು ಭಾವಿಸಿ ಎಡವಟ್ಟು ಮಾಡಿಕೊಂಡ ಮಹಿಳೆ ! 2 ಗಂಟೆ ತಡವಾಗಿ ಹೊರಟ ವಿಮಾನ

Pinterest LinkedIn Tumblr

43

ನ್ಯೂಯಾರ್ಕ್: ಮಹಿಳೆಯೊಬ್ಬಳು ಸಹಪ್ರಯಾಣಿಕ ಬರೆಯುತ್ತಿದ್ದ ಗಣಿತದ ಲೆಕ್ಕವನ್ನು ನೋಡಿ ಆತ ಉಗ್ರನೆಂದು ಭಾವಿಸಿದ ಪರಿಣಾಮ ವಿಮಾನ ಎರಡು ಗಂಟೆ ತಡವಾಗಿ ಹೊರಟ ಘಟನೆ ಅಮೆರಿಕದಲ್ಲಿ ನಡೆದಿದೆ.

ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ 40 ವರ್ಷದ ಗಿಡೋ ಮೆನ್‍ಝಿಯೋ ಮಹಿಳೆಯ ಎಡವಟ್ಟಿನಿಂದ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಲ್ಲಿ ಫಜೀತಿಗೀಡಾದರು.

ಅರ್ಥಶಾಸ್ತ್ರಜ್ಞರಾಗಿರುವ ಗಿಡೋ ನ್ಯೂಯಾರ್ಕ್‍ನ ಸಿರಾಕ್ಯೂಸ್‍ನಲ್ಲಿರುವ ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ಸೆಮಿನಾರ್ ನೀಡಲು ಹೊರಟಿದ್ದರು. ಈ ವೇಳೆ ವಿಮಾನದಲ್ಲಿ ಕುಳಿತು ಯಾವುದೋ ಮ್ಯಾಥ್ಸ್ ಫಾರ್ಮುಲಾವನ್ನ ಗೀಚುತ್ತಿದ್ದರು. ಇದನ್ನು ನೋಡಿ ಈತ ಉಗ್ರನಿರಬಹುದು ಎಂದು ಭಾವಿಸಿದ ಮಹಿಳೆ ವಿಮಾನದ ಸಿಬ್ಬಂದಿಗೆ ಒಂದು ಪತ್ರ ಕೊಟ್ಟು ನನ್ನ ಪಕ್ಕದಲ್ಲಿ ಕುಳಿತಿರುವವನು ಉಗ್ರನಿರಬಹುದು ಎಂದು ಹೇಳಿದ್ದಳು.

ಇದರಿಂದ ಟೇಕ್ ಆಫ್‍ಗೆ ಸಿದ್ಧವಾಗಿದ್ದ ವಿಮಾನ ಮತ್ತೆ ಗೇಟ್‍ನತ್ತ ಚಲಿಸಿತು. ಪ್ರಾಧ್ಯಾಪಕ ಗಿಡೋ ತಾನು ಬರೆದಿದ್ದು ಗಣಿತದ ಲೆಕ್ಕ ಎಂದು ಅಲ್ಲಿನ ಅಧಿಕಾರಿಗಳಿಗೆ ಮನದಟ್ಟು ಮಾಡುವುದರೊಳಗೆ ಆರೋಪ ಮಾಡಿದ ಮಹಿಳೆ ವಿಮಾನದಿಂದ ಇಳಿದಿದ್ದಳು.

Write A Comment