ಅಂತರಾಷ್ಟ್ರೀಯ

ನವಜಾತ ಶಿಶುಗಳು ಹಿರಿಯರನ್ನು ಅನುಕರಿಸುವುದಿಲ್ಲ!: ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿವಿ ಅಧ್ಯಯನದಿಂದ ಬಹಿರಂಗ

Pinterest LinkedIn Tumblr

07-newborns-web-1ಮೆಲ್ಬೋರ್ನ್: ನವಜಾತ ಶಿಶುಗಳು ವಯಸ್ಕರನ್ನು ಅನುಕರಿಸುವುದಿಲ್ಲ ಎಂಬುದು ಅಧ್ಯಯನ ಒಂದರಿಂದ ಬೆಳಕಿಗೆ ಬಂದಿದೆ. ಇದರೊಂದಿಗೆ ನವಜಾತ ಶಿಶುಗಳು ಹಿರಿಯರ ಕೈಸನ್ನೆ, ಮುಖಭಾವ ಅಥವಾ ದನಿಗಳನ್ನು ಜನನ ಬಳಿಕದ ಮೊದಲ ಕೆಲವು ತಿಂಗಳುಗಳಲ್ಲಿ ಅನುಕರಿಸುತ್ತವೆ ಎಂಬ ಸುದೀರ್ಘ ಕಾಲದ ನಂಬಿಕೆಗಳು ಸುಳ್ಳಾಗಿವೆ.

106 ನವಜಾತ ಶಿಶುಗಳನ್ನು ಮೊದಲ ಕೆಲವು ತಿಂಗಳುಗಳ ಕಾಲ ಅಧ್ಯಯನ ಮಾಡಿದ ಸಂಶೋಧಕರು, ‘ನವಜಾತ ಶಿಶುಗಳು ಅನುಕರಣೆ ಸಾಮರ್ಥ್ಯ ಹೊಂದಿವೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ಇಲ್ಲ’ ಎಂದು ಬಹಿರಂಗ ಪಡಿಸಿದ್ದಾರೆ.

1980ರ ದಶಕ ಮತ್ತು 1990ರ ದಶಕಗಳಲ್ಲಿ ನವಜಾತ ಶಿಶುಗಳ ಮೇಲೆ ಈ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನಗಳಲ್ಲಿ ನವಜಾತ ಶಿಶುಗಳು ಅನುಕರಣೆ ಮಾಡುತ್ತವೆ ಎಂಬುದಕ್ಕೆ ಆಧಾರಗಳು ಲಭಿಸಿಲ್ಲ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾಲಯದ ವರ್ಜೀನಿಯಾ ಸಂಶೋಧಕರ ಸ್ಲಾಟರ್ ಹೇಳಿದ್ದಾರೆ. ಹಿಂದಿನ ಸಂಶೋಧಕರು ನವಜಾತ ಶಿಶುಗಳು ಹಿರಿಯರ ಸನ್ನೆ, ಮಾತುಗಳಿಗೆ ನೀಡುವ ಪ್ರತಿಕ್ರಿಯೆಯನ್ನು ಮಾತ್ರವೇ ಗಮನಿಸಿದ್ದಾರೆ ಎಂದು ಅವರು ಹೇಳಿದರು.

Write A Comment