ಅಂತರಾಷ್ಟ್ರೀಯ

ವಿಶ್ವದಲ್ಲಿ ಹಿಂಸಾಚಾರ ಹೆಚ್ಚಲು ಟಾಮ್ ಅಂಡ್ ಜೆರಿ ಕಾರ್ಟೂನ್ ಕಾರಣವಂತೆ !

Pinterest LinkedIn Tumblr

No Merchandising. Editorial Use Only Mandatory Credit: Photo by Everett Collection / Rex Features ( 525991f ) 'Tom and Jerry' TOM AND JERRY

ಕೈರೋ: ಮಕ್ಕಳ ಫೇವರಿಟ್ ಟಾಮ್ ಅಂಡ್ ಜೆರಿ ಕಾರ್ಟೂನ್ ಮನರಂಜನೆ ನೀಡುವುದರ ಜೊತೆಗೆ ನಮ್ಮನ್ನು ನಕ್ಕು ನಗಿಸುತ್ತದೆ. ಆದರೆ ಈಜಿಪ್ಟ್ ನ ಅಧಿಕಾರಿಯೊಬ್ಬರು ಟಾಮ್ ಅಂಡ್ ಜೆರಿ ಪ್ರಪಂಚದಾದ್ಯಂತ ಹಿಂಸಾಚಾರ ಹರಡಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಕೈರೋದ ಮಾಹಿತಿ ಸೇವಾ ಅಧಿಕಾರಿಯಾಗಿರುವ ಸಲಾ ಅಬ್ದೇಲ್ ಶೇಕ್ ಮಕ್ಕಳು ಟಾಮ್ ಅಂಡ್ ಜೆರಿ ಕಾರ್ಟೂನ್ ನೋಡುವುದರಿಂದ ಹಿಂಸಾಚಾರ ಸಂಸ್ಕೃತಿ ಹೆಚ್ಚುತ್ತದೆ ಎಂದು ಆರೋಪಿಸಿದ್ದಾರೆ.

ಟಾಮ್ ಬೆಕ್ಕು, ಜೆರಿ ಇಲಿಯನ್ನು ಯಾವಾಗಲು ಅಟ್ಟಾಡಿಸಿಕೊಂಡು ಓಡುವುದು, ಅದಕ್ಕೆ ಹೊಡೆಯುವುದನ್ನು ನೋಡಿ ಮಕ್ಕಳ ಮನಸ್ಸಿನಲ್ಲಿ ಅದೇ ಭಾವನೆ ಮೂಡಿ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ದೂರಿದ್ದಾರೆ.

Write A Comment