ಅಂತರಾಷ್ಟ್ರೀಯ

ಸದ್ಯ ಭಾರತಕ್ಕೆ ಮರಳಲ್ಲ: ಮಲ್ಯ

Pinterest LinkedIn Tumblr

malllluಲಂಡನ್‌: ಸದ್ಯ ಭಾರತಕ್ಕೆ ಮರಳಲು ಸಾಧ್ಯವಿಲ್ಲ ಎಂದು ಉದ್ಯಮಿ ವಿಜಯ್‌ ಮಲ್ಯ ತಿಳಿಸಿದ್ದಾರೆ.

ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಮಲ್ಯ ಅವರು ಬಲವಂತವಾಗಿ ನನ್ನನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನನ್ನ ಪಾಸ್‌ಪೊರ್ಟ್‌ ಅನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಅಥವಾ ನನ್ನನ್ನು ಬಂಧಿಸುವುದರಿಂದ ಯಾರಿಗೂ ಬಿಡಿಗಾಸು ಸಿಗುವುದಿಲ್ಲ ಎಂದು ಮಲ್ಯ ತಿಳಿಸಿದ್ದಾರೆ.

ಈಗಾಗಲೇ ಬ್ಯಾಂಕ್‌ಗಳ ಅಧಿಕಾರಿಗಳ ಜೊತೆ ನಿರಂತರ ಮಾತುಕತೆಯಲ್ಲಿ ಇದ್ದು ಸಾಧ್ಯವಾದಷ್ಟು ಸಾಲ ಮರುಪಾವತಿ ಮಾಡಲು ಪ್ರಯತ್ನಿಸುತ್ತಿರುವುದಾಗಿ ಮಲ್ಯ ಹೇಳಿದ್ದಾರೆ.

ನಾನು ಸಾಲಕ್ಕೆ ಹೆದರಿ ಭಾರತದಿಂದ ಓಡಿ ಬಂದಿಲ್ಲ, ಅಂತರರಾಷ್ಟ್ರೀಯ ಉದ್ಯಮಿಯಾಗಿರುವುದರಿಂದ ಲಂಡನ್‌ನಲ್ಲಿ ನೆಲೆಸಿದ್ದೇನೆ ಎಂದಿದ್ದಾರೆ.

ಒಬ್ಬ ಪ್ರಜೆಯಾಗಿ, ಸಂಸದನಾಗಿ ಭಾರತಕ್ಕೆ ಮರಳಲು ಸಿದ್ಧನಿದ್ದೇನೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬರಲು ಸಾಧ್ಯವಾಗುತ್ತಿಲ್ಲ. ಭಾರತ ಸರ್ಕಾರ ನನ್ನ ವಿರುದ್ಧ ಯಾವ ಕ್ರಮ ಕೈಗೊಂಡರೂ ಅದನ್ನು ಸ್ವೀಕರಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.

Write A Comment