ಅಂತರಾಷ್ಟ್ರೀಯ

ಪ್ಯಾರಿಸ್ ದಾಳಿ ರೂವಾರಿ ಉಗ್ರ ಮುಹಮ್ಮದ್ ಅಬ್ರಿನಿ ಬಂಧನ

Pinterest LinkedIn Tumblr

paris-attack-suspect

ಬ್ರುಸೆಲ್ಸ್ : ನವೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ನಡೆದ ಉಗ್ರ ದಾಳಿಯ ರೂವಾರಿ ಮೊಹಮ್ಮದ್ ಅಬ್ರಿನಿ ಅವರನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ.

ಅದೇ ವೇಳೆ ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ಮಾರ್ಚ್ 22 ರಂದು ನಡೆದ ಬಾಂಬ್ ಸ್ಫೋಟಕ್ಕಿಂತ ಮುನ್ನ ಸಿಸಿಟಿವಿಯಲ್ಲಿ ಕಾಣಲ್ಪಟ್ಟ ಹ್ಯಾಟ್ ಧರಿಸಿದ ವ್ಯಕ್ತಿ ಅಬ್ರಿನಿಯೇ ಆಗಿದ್ದಾರೆ ಎಂದು ಬೆಲ್ಜಿಯನ್ ಮಾಧ್ಯಮಗಳು ಹೇಳಿವೆ.

ಈ ಉಗ್ರ ದಾಳಿಗೆ ಸಂಬಂಧಿಸಿದಂತೆ ಶುಕ್ರವಾರ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಬ್ರುಸೆಲ್ಸ್‌ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 32 ಮಂದಿ ಸಾವಿಗೀಡಾಗಿದ್ದರು. ಏತನ್ಮಧ್ಯೆ ಪ್ಯಾರಿಸ್‌ನಲ್ಲಿ ನವೆಂಬರ್ 13 ಕ್ಕೆ ನಡೆದ ದಾಳಿಯಲ್ಲಿ 130 ಮಂದಿ ಸಾವನ್ನಪ್ಪಿದ್ದರು.

Write A Comment