ಅಂತರಾಷ್ಟ್ರೀಯ

ಮಧ್ಯ ಚೀನಾದ ಹುನಾನ್ ಹೆದ್ದಾರಿಯೊಂದರಲ್ಲಿ ಟ್ರಕ್ಸ್ಪೋಟಗೊಂಡು ಐವರ ಬಲಿ, 20 ಜನರಿಗೆ ಗಾಯ

Pinterest LinkedIn Tumblr

chinaಬೀಜಿಂಗ್, ಮಾ.20- ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆದ್ದಾರಿಯೊಂದರಲ್ಲಿ ಸಂಭವಿಸಿದ ಟ್ರಕ್ ಸ್ಫೋಟ ದುರ್ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು ಇತರ 20 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಟ್ರಕ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದುದೇ ಈ ಸ್ಫೋಟಕ್ಕೆ ಕಾರಣ ಇರಬಹುದು ಎನ್ನಲಾಗಿದೆ. ಬೀಜಿಂಗ್‌ನಿಂದ ಹಾಂಗ್‌ಕಾಂಗ್ ಮಧ್ಯೆ ಹಾದು ಹೋಗುವ ಈ ಹೆದ್ದಾರಿಯಲ್ಲಿ ಈ ಸ್ಫೋಟ ಸಂಭವಿಸಿದೆ.

ಈ ಸ್ಫೋಟದ ತೀವ್ರತೆಗೆ ರಸ್ತೆಯಲ್ಲಿ ಹೋಗುತ್ತಿದ್ದ ಎರಡು ಕಾರುಗಳು, ಎರಡು ಟ್ರಕ್‌ಗಳು ಆಹುತಿಯಾಗಿವೆ. ಗಾಯಾಳುಗಳಲ್ಲಿ ನಾಲ್ವರು ಗಂಭೀರವಾಗಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Write A Comment