ಅಂತರಾಷ್ಟ್ರೀಯ

ಅಮೆರಿಕ ‘ವಿಶ್ವದ ಮೂರನೇ ದೇಶ’ಗಳ ಮಟ್ಟಕ್ಕೆ ಇಳಿದಿದೆ: ಡೋನಲ್ಡ್‌ ಟ್ರಂಪ್‌

Pinterest LinkedIn Tumblr

trump-19ವಾಷಿಂಗ್ಟನ್‌: ದುಬೈ ಹಾಗೂ ಚೀನಾದ ಮೂಲ ಸೌಕರ್ಯಗಳಿಗೆ ಹೋಲಿಸಿದರೆ ಅಮೆರಿಕ ಈಗ ತೃತೀಯ ಜಗತ್ತಿನ ರಾಷ್ಟ್ರವಾಗಿದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೋನಲ್ಡ್‌ ಟ್ರಂಪ್‌ ಅವರು ಹೇಳಿದ್ದಾರೆ. ಅಲ್ಲದೆ ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದಾರೆ.
ಇಂದು ಉಟಾಹ್ ದ ಸಾಲ್ ಲೇಕ್‌ ಸಿಟಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ನಾವು ಈಗ ವಿಶ್ವದ ಮೂರನೇ ಜಗತ್ತಿನವರಾಗಿದ್ದೇವೆ. ನೀವು ದುಬೈ, ಚೀನಾಗೆ ಹೋದರೆ ಅಲ್ಲಿನ ಮೂಲ ಸೌಕರ್ಯಗಳನ್ನು ಕಂಡು ದಂಗಾಗುವಿರಿ. ಅವರು ರೈಲು, ರಸ್ತೆ, ಬುಲೆಟ್‌ ಟ್ರೈನ್‌ಗಳನ್ನು ನೀವು ನೋಡಬೇಕು. ಅದೇ ನೀವು ನ್ಯೂಯಾರ್ಕ್‌ಗೆ ಹೋದರೆ ಇಲ್ಲಿ ಅವೆಲ್ಲ ನೂರು ವರ್ಷಗಳಷ್ಟು ಹಳೆಯವು ಎಂದು ನಿಮಗೆ ಅನ್ನಿಸುತ್ತದೆ ಎಂದರು.
ವ್ಯಾಪಾರ, ವಾಣಿಜ್ಯ ವಹಿವಾಟಿಗೆ ಸಂಬಂಧಪಟ್ಟ ಹಾಗೆ ನಾವೀಗ ಚಾಣಾಕ್ಷಮತಿಗಳಾಗಬೇಕಾಗಿದೆ. ಏಕೆಂದರೆ ನಮ್ಮದೀಗ ಬಡ ರಾಷ್ಟ್ರವಾಗಿದೆ. ನಾವು ಈಗ ಪುನಃ ಅಮೆರಿಕವನ್ನು ಮಹೋನ್ನತ ದೇಶವನ್ನಾಗಿ ಮಾಡಬೇಕಾಗಿದೆ ಎಂದು ಟ್ರಂಪ್‌ ಅಮೆರಿಕದ ಹಾಲಿ ಸ್ಥಿತಿಗತಿಯನ್ನು ನೇರವಾಗಿ ಮುಂದಿಟ್ಟರು.

Write A Comment