ಅಂತರಾಷ್ಟ್ರೀಯ

ಮದರ್ ಥೆರೆಸಾರಿಗೆ ‘ಸಂತ’ ಪದವಿ

Pinterest LinkedIn Tumblr

motherteresa-e1458044998356ವ್ಯಾಟಿಕನ್ ಸಿಟಿ: ಸಿಸ್ಟರ್ ಮದರ್ ಥೆರೆಸಾರಿಗೆ ಸಂತ ಪದವಿ ನೀಡಲು ವ್ಯಾಟಿಕನ್ ಪೋಪ್ ಫ್ರಾನ್ಸಿಸ್​​ ನಿರ್ಧರಿಸಿದ್ದಾರೆ. ಈ ಬಗ್ಗೆ ಪೋಪ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಥೆರೆಸಾ ಅವರಿಗೆ ಅತ್ಯುನ್ನತ ಗೌರವ ಪ್ರದಾನ ಮಾಡುವ ಬಗ್ಗೆ ಪಾದ್ರಿಗಳ ಸಮಿತಿ ಶಿಫಾರಸು ಮಾಡಿತ್ತು. ಥೆರೆಸಾ ಸಾವಿನ ದಿನ ಅಂದರೆ ಸೆಫ್ಟೆಂಬರ್ 4ರಂದೇ ರೋಮ್​ನಲ್ಲಿ ಮಹೋನ್ನತ ಗೌರವ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಕೋಲ್ಕತ್ತಾದಲ್ಲಿ ನೆಲೆಸಿದ ಥೆರೆಸಾ ಅನೇಕ ಮಂದಿ ಬೆವರ ಬಾಳಿಗೆ ಬೆಳಕಾಗಿ ನಿಂತಿದ್ದರು. ತನ್ನ ಸಾಮಾಜಿಕ ಕಾರ್ಯಗಳ ಮೂಲಕ ವಿಶ್ವ ಮನ್ನಣೆ ಗಳಿಸಿದೆ.

1910 ಆಗಸ್ಟ್ 26ರಂದು ಕ್ಯಾಥೋಲಿಕ್​ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ್ದ ಥೆರೆಸಾ, ನೋಬೆಲ್ ಪ್ರಶಸ್ತಿ, ಭಾರತ ರತ್ನ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.

Write A Comment