ಅಂತರಾಷ್ಟ್ರೀಯ

ಮಹಿಳೆಯರಿಗೆ ಅವಮಾನ ಮಾಡಿದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಈಜಿಪ್ಟ್ ನ್ಯಾಯಾಲಯ

Pinterest LinkedIn Tumblr

facebook-jail

ಕೈರೊ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ ವ್ಯಕ್ತಿಯೋಬ್ಬನಿಗೆ ಈಜಿಪ್ಟ್ ನ್ಯಾಯಾಲಯ 4 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಈಜಿಪ್ಟ್ ನ ಅಂತರ್ಜಾಲ ಪತ್ರಿಕೆಯೊಂದರ ಮಾಹಿತಿಯ ಪ್ರಕಾರ, ಡೈರಿ ಆಫ್ ಎ ಕ್ರಷ್ಡ್ ಹಸ್ಬೆಂಡ್ ಎಂಬ ಫೇಸ್ ಬುಕ್ ಪೇಜ್ ನ್ನು ನಿರ್ವಹಣೆ ಮಾಡುತ್ತಿದ್ದ ಎಲ್-ಸೋಬ್ಕಿ ಎಂಬ ವ್ಯಕ್ತಿ ಸಿಬಿಸಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಈಜಿಪ್ಟ್ ನ ಬಹುತೇಕ ಮಹಿಳೆಯರು ತಮ್ಮ ಗಂಡದಿರಿಗೆ ಮೋಸ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ. ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಫೇಸ್ ಬುಕ್ ಪೇಜ್ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಮಹಿಳೆಯರಿಗೆ ಅವಮಾನ ಮಾಡಿ ಸಾರ್ವಜನಿಕ ಶಾಂತಿಯನ್ನು ಕದಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಲ್-ಸೋಬ್ಕಿ ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಎಲ್-ಸೋಬ್ಕಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ಮಹಿಳೆಯರಿಗೆ ನೋವುಂಟುಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

Write A Comment