ಅಂತರಾಷ್ಟ್ರೀಯ

5 ವರುಷಗಳ ಹಿಂದೆ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾಕ್ ಗವರ್ನರ್ ಪುತ್ರ ಪತ್ತೆ

Pinterest LinkedIn Tumblr

shahbaz-taseer

ಇಸ್ಲಾಮಾಬಾದ್: ದೇಶದಲ್ಲಿರುವ ಧರ್ಮನಿಂದೆ ನಿಯಮವನ್ನು ಪ್ರಶ್ನಿಸಿದ್ದಕ್ಕಾಗಿ ಅಂಗರಕ್ಷಕರಿಂದಲೇ ಹತ್ಯೆಗೀಡಾದ ಪಾಕಿಸ್ತಾನದ ಗವರ್ನರ್ ಸಲ್ಮಾನ್ ತಸೀರ್ ಅವರ ಪುತ್ರ ಉಗ್ರರಿಂದ ಅಪಹರಣಕ್ಕೊಳಗಾಗಿದ್ದನು. 5 ವರುಷಗಳ ಹಿಂದೆ ಶಹಬಾಜ್ ತಸೀರ್ ಅಪಹರಣಕ್ಕೊಳಗಾಗಿದ್ದು, ಇದೀಗ ಆತ ಪತ್ತೆಯಾಗಿದ್ದಾನೆ ಎಂದು ಬಲ್ಲಮೂಲಗಳು ಹೇಳಿವೆ.

ಸಲ್ಮಾನ್ ತಸೀರ್ ಅವರ ಹಂತಕನನ್ನು ಗಲ್ಲಿಗೇರಿಸಿದ ಒಂದೇ ವಾರದಲ್ಲಿ ಶಹಬಾಜ್ ತಸೀರ್ ಪತ್ತೆಯಾಗಿದ್ದಾನೆ.

2011 ಅಗಸ್ಟ್ ತಿಂಗಳಲ್ಲಿ ಲಾಹೋರ್ನಲ್ಲಿ ಶಹಬಾಜ್ ಅಪಹರಣಕ್ಕೊಳಗಾಗಿದ್ದನು.
ಗವರ್ನರ್ನ್ನು ಹತ್ಯೆಗೈದ ಮುಮ್ತಾಜ್ ಖಾದ್ರಿಯನ್ನು ಫೆ. 29ಕ್ಕೆ ಗಲ್ಲಿಗೇರಿಸಲಾಗಿತ್ತು.
ಶಹಬಾಜ್ ನ್ನು ಅಪಹರಿಸಿದ್ದು ತಾವೇ ಎಂದು ಪಾಕಿಸ್ತಾನಿ ತಾಲೀಬಾನ್ ಅಧಿಕೃತವಾಗಿ ಹೇಳಿಲ್ಲವಲಾದರೂ ಇವರೇ ಅಪಹರಣ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ದಕ್ಷಿಣ ವಜಿರಿಸ್ತಾನ್ನ ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶದಲ್ಲಿ ಶಹಬಾಜ್ನ್ನು ಬಚ್ಚಿಡಲಾಗಿತ್ತು. ಅನಂತರ 2014ರಲ್ಲಿ ಜರ್ಬ್ ಇ ಅರಬ್ ದಾಳಿ ನಡೆಸಿದ ನಂತರ ಅಲ್ಲಿಂದ ಬೇರೊಂದು ಸ್ಥಳಕ್ಕೆ ಆತನನ್ನು ಕರೆದೊಯ್ಯಲಾಗಿತ್ತು. ಇದೀಗ ಬಲೂಚಿಸ್ತಾನದ ಕುಚಲ್ಕ್ ಜಿಲ್ಲೆ ಯಿಂದ ಸುಮಾರು 25 ಕಿಮಿ ದೂರವಿರುವ ಕೆಟ್ಟಾ ಎಂಬಲ್ಲಿ ಈತನನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

Write A Comment